ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ನಲ್ಲಿ ಇಂಜಿನಿಯರಿಂಗ್ ನೇಮಕಕ್ಕೆ ಅರ್ಜಿ ಆಹ್ವಾನ

ಬೆಂಗಳೂರು : ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಕಂಪನಿಯಲ್ಲಿ ಟ್ರೈನಿ ಇಂಜಿನಿಯರ್ ಹುದ್ದೆಗೆ ಕಾಂಟ್ರಾಕ್ಟ್ ಬೇಸಿಸ್ ಮೇಲೆ ಅರ್ಜಿ ಆಹ್ವಾನಿಸಿದೆ. ಒಟ್ಟು 43 ಟ್ರೈನಿ ಇಂಜಿನಿಯರ್ ಹುದ್ದೆಗಳಿಗೆ ಆನ್ಲೈನ್ ಅರ್ಜಿಯನ್ನು ಕರೆದಿದೆ. ಅಭ್ಯರ್ಥಿಗಳು ಮೇ 25 ರ ಒಳಗಾಗಿ ಅರ್ಜಿ ಸಲ್ಲಿಸಲು ಸುತ್ತೋಲೆಯನ್ನು ಹೊರಡಿಸಲಾಗಿದೆ.

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್  ನಲ್ಲಿ ಕೆಲಸ ಮಾಡಲು ಬೇಕಾದ ಅರ್ಹತೆಗಳು

ಶೈಕ್ಷಣಿಕ ವಿದ್ಯಾರ್ಹತೆ 

ನಾಲ್ಕು ವರ್ಷಗಳ ಫುಲ್ ಟೈಮ್ ಬಿಎಸ್ಸಿ ಇಂಜಿನಿಯರಿಂಗ್, ಬ್ಯಾಚುಲರ್ ಆಫ್ ಇಂಜಿನಿಯರಿಂಗ್, ಬಿ ಟೆಕ್ ಇಂಜಿನಿಯರಿಂಗ್ ಕೋರ್ಸ್ ಗಳನ್ನು Aicte ಇಂದ ಗುರುತಿಸಲ್ಪಟ್ಟ ಯುನಿವರ್ಸಿಟಿ ಅಥವಾ ಆಯಾ ರಾಜ್ಯಗಳ ಮಾನ್ಯತೆ ಹೊಂದಿದ ವಿಶ್ವವಿದ್ಯಾನಿಲಯದಲ್ಲಿ ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್, ಇನ್ಫಾರ್ಮಶನ್ ಮತ್ತು ಕಮ್ಯುನಿಕೇಷನ್, ಕಂಪ್ಯೂಟರ್ ಸೈನ್ಸ್ ಯಾವುದಾದರೂ ಒಂದು ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿಯನ್ನು ಮಾಡಿರಬೇಕು. ಎಂಜಿನಿಯರಿಂಗ್ ನಲ್ಲಿ ಸಾಮಾನ್ಯ ಮತ್ತು ಓಬಿಸಿ ವರ್ಗದ ಅಭ್ಯರ್ಥಿಗಳು 55 ಪರ್ಸೆಂಟ್ ಎಲ್ಲ ಸೆಮಿಸ್ಟರ್ಗಳಲ್ಲಿ ತಿಳಿಸಿರಬೇಕು ಮತ್ತು ಸ್ಕ್ SC, ST ಮತ್ತು pwbd ಅಭ್ಯರ್ಥಿಗಳು ಪಾಸ್ ಕ್ಲಾಸ್ ಹೊಂದಿರಬೇಕು.

Experience

ಕನಿಷ್ಠ ಐದು ತಿಂಗಳ ಸಾಫ್ಟ್ವೇರ್ ಡೆವಲಪ್ಮೆಂಟ್ ವಿಭಾಗದಲ್ಲಿ ಅನುಭವ ಹೊಂದಿರಬೇಕು.

ವೇತನ ಶ್ರೇಣಿ

ಟ್ರೈನಿ ಇಂಜಿನಿಯರಿಗೆ ಮೊದಲ ವರ್ಷ ಮೂವತ್ತು ಸಾವಿರ ಎರಡನೇ ವರ್ಷ ಮೂವತೈದು ಸಾವಿರ ಮತ್ತು ಮೂರನೇ ವರ್ಷ 40,000 ವೇತನ ನೀಡಲಾಗುತ್ತದೆ.

Place of Posting

ಆಯ್ಕೆಯಾದ ಅಭ್ಯರ್ಥಿಗಳಿಗೆ ಕೊಚ್ಚಿ, ಪೊರಬಂದರ್, ಗಾಂಧಿನಗರ್, ಮುಂಬೈ, ಗೋವಾ, ಮಂಗಳೂರು, ಕೊಚ್ಚಿ, Vizag, ತೂತು ಕುಡಿ, ಚೆನ್ನೈ, ಕೊಲ್ಕತ್ತಾ, ಪೋರ್ಟ್ ಬ್ಲೇರ್ ಸ್ಥಳಗಳಲ್ಲಿ ಪೋಸ್ಟಿಂಗ್ ಕೊಡಲಾಗುತ್ತದೆ.

ಅಭ್ಯರ್ಥಿಯ ವಯಸ್ಸಿನ ಮಿತಿ

1/05/23 ದಿನಾಂಕಕ್ಕೆ ಸರಿಯಾಗಿ  ಜನರಲ್ ವರ್ಗದವರಿಗೆ 28 ವರ್ಷ ಮೀರಿರಬಾರದು.SC, ST ವರ್ಗದವರಿಗೆ 5 ವರ್ಷ ವಯಸ್ಸಿನ ವಿನಾಯಿತಿ, ಓಬಿಸಿ ವರ್ಗದವರಿಗೆ ಮೂರು ವರ್ಷ ವಿನಾಯಿತಿ, pwbd ವರ್ಗದವರಿಗೆ ಕನಿಷ್ಠ 40% ಅಥವಾ ಅದಕ್ಕಿಂತ ಹೆಚ್ಚು ನೂ ನ್ಯತೆ ಇರುವವರಿಗೆ 10 ವರ್ಷ ವಿನಾಯಿತಿ ನೀಡಲಾಗಿದೆ.

ನೇಮಕಾತಿ ವಿಧಾನ

ನಿಗದಿಪಡಿಸಲಾದ ವಿದ್ಯಾರ್ಥಿಗೆ ಸರಿಹೊಂದುವ ಅಭ್ಯರ್ಥಿಗಳು 85 ಅಂಕದ ಲಿಖಿತ ಪರೀಕ್ಷೆ ಬರೆಯಬೇಕು. ಲಿಖಿತ ಪರೀಕ್ಷೆ ಪಾಸ್ ಆದ ಅಭ್ಯರ್ಥಿಗಳಿಗೆ ನೇರ ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ. ಲಿಖಿತ ಪರೀಕ್ಷೆ 15 ಅಂಕವನ್ನು ನೇರ ಸಂದರ್ಶನಕ್ಕೆ ಪರಿಗಣಿಸಲಾಗುತ್ತದೆ. ಲಿಖಿತ ಮತ್ತು ನೇರ ಸಂದರ್ಶನದಲ್ಲಿ ಪಾಸ್ ಆಗಲು ಕನಿಷ್ಠ ಒಟ್ಟು 35% ಸಾಮಾನ್ಯ ಮತ್ತು ಓಬಿಸಿ ವರ್ಗದವರಿಗೆ, 30% sc St ವರ್ಗದವರಿಗೆ ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಸಲು ಇರುವ ಶುಲ್ಕ 

ಸಾಮಾನ್ಯ, ಓಬಿಸಿ ವರ್ಗದವರಿಗೆ gst ಸೇರಿ 177 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ. Sc St ಮತ್ತು ಅಂಗವಿಕಲರಿಗೆ ಯಾವುದೇ ಶುಲ್ಕವಿರುವುದಿಲ್ಲ, ನಿಗದಿ ಪಡಿಸಲಾದ ಶುಲ್ಕವನ್ನು SBI ಬ್ಯಾಂಕ್ ಮೂಲಕ ಪಾವತಿಸಬೇಕು. ಒಂದು ಸಾರಿ ಪಾವತಿ ಮಾಡಿದ ಶುಲ್ಕವನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸಲು ಅವಕಾಶವಿಲ್ಲ.

ಅಭ್ಯರ್ಥಿ ಸಲ್ಲಿಸಬೇಕಾದ ದಾಖಲಾತಿಗಳು

ಎಸ್ ಎಸ್ ಎಲ್ ಸಿ / 10ನೇ ತರಗತಿ ಅಂಕಪಟ್ಟಿ, ಹುಟ್ಟಿದ ದಿನಾಂಕ ದೃಢಪಡಿಸಲು ಯಾವುದಾದರೂ ಒಂದು ದಾಖಲೆಯನ್ನು ಸಲ್ಲಿಸಬೇಕು. ಬಿಎಸ್ಸಿ ಇಂಜಿನಿಯರಿಂಗ್, ಮಿಟೆಕ್ ಎಂಜಿನಿಯರಿಂಗ್, ಬ್ಯಾಚುಲರ್ ಆಫ್ ಇಂಜಿನಿಯರಿಂಗ್ ಸರ್ಟಿಫಿಕೇಟ್, ಎಲ್ಲ ಸೆಮಿಸ್ಟರ್ನ ಅಂಕಪಟ್ಟಿ, ಜಾತಿ ಸರ್ಟಿಫಿಕೇಟ್ ಮತ್ತು ಹಿಂದಿನ ಕೆಲಸದ ಅನುಭವದ ಸರ್ಟಿಫಿಕೇಟ್ ನಲ್ಲಿ ಕಡ್ಡಾಯವಾಗಿ ಪೇಸ್ಲಿಪ್ ಮತ್ತು ಉದ್ಯೋಗಿ ಐಡಿ ಕಾರ್ಡ್ ಪ್ರೂಫ್ ಅನ್ನು ಸಲ್ಲಿಸಬೇಕು. ಅಭ್ಯರ್ಥಿಯ ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ, ಪಾನ್ ಕಾರ್ಡ್, ಪಾಸ್ಪೋರ್ಟ್ ಯಾವುದಾದರು ಒಂದು ದಾಖಲೆಯನ್ನು ಸಲ್ಲಿಸಬೇಕು.

 

ಸಾಮಾನ್ಯ ಸೂಚನೆಗಳು 

ಅಭ್ಯರ್ಥಿಯು ಭಾರತೀಯ ಪ್ರಜೆಯಾಗಿದ್ದರೆ ಮಾತ್ರ ಅರ್ಜಿ ಸಲ್ಲಿಸಬಹುದು. ಕಂಪನಿಗೆ ಬೇಕಾದಲ್ಲಿ ಮಾತ್ರ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು, ನೇಮಕವಾದ ಅಭ್ಯರ್ಥಿಗೆ 2 ಲಕ್ಷದ ಮೆಡಿಕಲ್ ಇನ್ಸೂರೆನ್ಸ್ ಮತ್ತು 5 ಲಕ್ಷದ ಜೀವ ಭದ್ರತೆಯ ವಿಮೆಯನ್ನು ನೇಮಕಾತಿ ಮಾಡುವಾಗ ನೀಡಲಾಗುತ್ತದೆ. ನೇಮಕತಿಯ ಪರೀಕ್ಷೆಯ ನಕಲು ಪ್ರತಿ ಪರೀಕ್ಷಿಸಲು ಅವಕಾಶವಿರುವುದಿಲ್ಲ. ಕಂಪನಿ ನಿರ್ಧಾರ ಅಂತಿಮ ನಿರ್ಧಾರವಾಗಿದೆ

ಸಾಹಿತ್ಯ ಅಕಾಡೆಮಿಯಲ್ಲಿ ಹಿರಿಯ ಅಕೌಂಟೆಂಟ್ ಮತ್ತು ವಿವಿಧ ಹುದ್ದೆಗಳು 

ಕೇಂದ್ರೀಯ ಸಾಹಿತ್ಯ ಅಕಾಡೆಮಿ ಒಂದು ಭಾರತ ಸರಕಾರದ ministry of cultural ನ ಅಡಿಯಲ್ಲಿ ಬರುವ ಒಂದು ಸಂಸ್ಥೆಯಾಗಿದೆ. 24 ಭಾರತೀಯ ಪ್ರಾದೇಶಿಕ ಭಾಷೆಗಳನ್ನು ಒಳಗೊಂಡಂತೆ ಮತ್ತು ಸಾಹಿತ್ಯ ವಿಭಾಗದಲ್ಲಿ ಪ್ರಶಸ್ತಿ, ಬಿರುದು, ಸಾಹಿತ್ಯ ಪ್ರದರ್ಶನ, ಸಾಹಿತ್ಯ ಪಬ್ಲಿಕೇಶನ್ ಮುಂತಾದ ಅನೇಕ ಕೆಲಸಗಳನ್ನು ಸಾಹಿತ್ಯಕ್ಕೆ ಸಂಬಂಧಿಸಿದಂತೆ ಮಾಡುತ್ತದೆ.

ಹುದ್ದೆಗಳ ವಿವರ

Deputy secretary – 1

Senior accountant – 1

Publication assistant -1

Program assistant – 1

Stenographer grade || – 2

Multitasking staff – 3

ವಿದ್ಯಾರ್ಹತೆ 

ಡೆಪ್ಯೂಟಿ ಸೆಕ್ರೆಟರಿ ಹುದ್ದೆಗೆ ಯಾವುದೇ ಮಾನ್ಯತೆ ಹೊಂದಿರುವ ವಿಶ್ವವಿದ್ಯಾನಿಲಯದಿಂದ ಅಕಾಡೆಮಿ ನಿಗದಿಪಡಿಸಿರುವ ಭಾಷೆಗಳಲ್ಲಿ ಪದವಿ ಮತ್ತು ಕಂಪ್ಯೂಟರ್ ಬಗ್ಗೆ ತಿಳಿದಿರಬೇಕು.

ಸೀನಿಯರ್ ಅಕೌಂಟೆಂಟ್ ಹುದ್ದೆಗೆ ವಾಣಿಜ್ಯ ವಿಭಾಗದಲ್ಲಿ ಯಾವುದೇ ಮಾನ್ಯತೆ ಹೊಂದಿರುವ ವಿಶ್ವವಿದ್ಯಾನಿಲಯದಿಂದ ಪದವಿ ಮತ್ತು ಕನಿಷ್ಠ ಐದು ವರ್ಷಗಳ ಕಾಲ ಅಕೌಂಟೆಂಟ್ ವಿಭಾಗದಲ್ಲಿ ಅನುಭವ ಹೊಂದಿರಬೇಕು.

ಪಬ್ಲಿಕೇಶನ್ ಅಸಿಸ್ಟೆಂಟ್ ಹುದ್ದೆಗೆ ಯಾವುದೇ ಮಾನ್ಯತೆ ಹೊಂದಿರುವ ವಿಶ್ವವಿದ್ಯಾನಿಲಯದಿಂದ ಪದವಿ ಅಥವಾ ಡಿಪ್ಲೋಮಾ ಇನ್ ಪ್ರಿಂಟಿಂಗ್ ವಿಭಾಗದಲ್ಲಿ ಡಿಪ್ಲೋಮೋ ಹೊಂದಿರಬೇಕು ಮತ್ತು ಪ್ರಾಥಮಿಕವಾಗಿ ಕಂಪ್ಯೂಟರ್ ಬಗ್ಗೆ ಜ್ಞಾನ ಹೊಂದಿರಬೇಕು.

ಪ್ರೋಗ್ರಾಮ್ ಅಸಿಸ್ಟೆಂಟ್ ಹುದ್ದೆಗೆ ಮಾನ್ಯತೆ ಹೊಂದಿರುವ ವಿಶ್ವವಿದ್ಯಾನಿಲಯದಿಂದ ಪದವಿ ಮತ್ತು ಐದು ವರ್ಷಗಳ ಕಾಲ ಸರಕಾರಿ ಅಕಾಡೆಮಿಯಲ್ಲಿ ಅನುಭವ ಹೊಂದಿರಬೇಕು. ಕಂಪ್ಯೂಟರ್ ಬಗ್ಗೆ ಬೇಸಿಕ್ ಅನುಭವ ಹೊಂದಿರಬೇಕು.

ಸ್ಟೆನೋಗ್ರಾಫರ್ ಹುದ್ದೆಗೆ ಯಾವುದೇ ರಾಜ್ಯದ ಬೋರ್ಡ್ ಅಥವಾ ಮಾನ್ಯತೆ ಹೊಂದಿದ ಖಾಸಗಿ ಸಂಸ್ಥೆಗಳಿಂದ ಪಿಯುಸಿ ಆಗಿರಬೇಕು ಮತ್ತು ಇಂಗ್ಲಿಷ್ ಹಾಗೂ ಹಿಂದಿಯಲ್ಲಿ 80 wpm ವೇಗದಲ್ಲಿ ಟೈಪ್ ಮಾಡಬೇಕು ಮತ್ತು ಒಂದು ವರ್ಷಗಳ ಕಾಲ ಕನಿಷ್ಠ ಸ್ಟೆನೋಗ್ರಾಫರ್ ವಿಭಾಗದಲ್ಲಿ ಅನುಭವ ಹೊಂದಿರಬೇಕು.

ಮಲ್ಟಿ ಟಾಸ್ಕಿಂಗ್ ಸ್ಟಾಪ್ ಹುದ್ದೆಗೆ 10ನೇ ತರಗತಿ ಅಥವಾ ಐಟಿಐ ವಿಭಾಗದಲ್ಲಿ ವಿದ್ಯಾಭ್ಯಾಸ ಹೊಂದಿರಬೇಕು ಮತ್ತು ಕಂಪ್ಯೂಟರ್ ಬಗ್ಗೆ  ಪ್ರಾಥಮಿಕ ಜ್ಞಾನ ಹೊಂದಿರಬೇಕು.

ವೇತನ ಶ್ರೇಣಿ 

Deputy secretary : 67700 to 204700.

Senior accountant : 35400 to 112400

Publication assistant : 35400 to 112400

Program assistant : 35400 to 112400

Stenographer grade || : 25500 to 81100

Multi tasking staff : 18000 to 56900.

ವಯೋಮಿತಿ 

ಮೇಲಿನ ಎಲ್ಲಾ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಗೆ ಕನಿಷ್ಠ 30 ವರ್ಷದಿಂದ ಗರಿಷ್ಠ ಐವತ್ತು ವರ್ಷದವರೆಗೆ ಹುದ್ದೆಗೆ ಅನುಸಾರವಾಗಿ ವಯಸ್ಸಿನ ಮಿತಿಯನ್ನು ನೀಡಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ 

ಆಸಕ್ತ ಅಭ್ಯರ್ಥಿಗಳು ಆಫ್ಲೈನ್ ಮತ್ತು ಆನ್ಲೈನ್ ಮೋಡ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಸ್ವಯಂ ದೃಢೀಕರಿಸಿದ ದಾಖಲೆಗಳೊಂದಿಗೆ ಕಾರ್ಯದರ್ಶಿಗಳು, ಸಾಹಿತ್ಯ ಅಕಾಡೆಮಿ, ರವೀಂದ್ರ ಭವನ, 35 ಫಿರೋಜ್ ಷಾ ರೋಡ್, ನವದೆಹಲಿ 110001 ಈ ವಿಲಾಸಕ್ಕೆ ಪೋಸ್ಟ್ ಮಾಡಬಹುದು. ಆಸಕ್ತ ಅಭ್ಯರ್ಥಿಗಳು ಜೂನ್ 12 2023ರ ಒಳಗಾಗಿ ಅರ್ಜಿ ಸಲ್ಲಿಸಬೇಕು.

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಒತ್ತಿ ಅರ್ಜಿ ಸಲ್ಲಿಸಬಹುದು.http://(http://sahitya-akademi.gov.in).

 

Leave a Comment