ಲೋಕಸಭೆಗೆ ಪುತ್ತಿಲ ; ಇದು ಹಿಂದೂ ಕಾರ್ಯಕರ್ತರ ಒಮ್ಮತದ ನಿರ್ಧಾರ!

ಪುತ್ತೂರು : ಲೋಕಸಭೆಗೆ ಪುತ್ತಿಲ ಎಂಬ ಘೋಷ ವಾಕ್ಯ ಹೊರಹೊಮ್ಮಲು ಮುಖ್ಯ ಕಾರಣವೆಂದರೆ ಕಾರ್ಯಕರ್ತರ ನಿರ್ಲಕ್ಷ್ಯ, ಅಭ್ಯರ್ಥಿ ಆಯ್ಕೆಯಲ್ಲಿ ಮಾಡಿದ ಎಡವಟ್ಟು, ಸ್ವಾರ್ಥ ಮತ್ತು ಮಹಾನ್ ನಾಯಕರುಗಳ ಅಹಂಕಾರದ ಕಾರಣದಿಂದ ಹಿಂದುತ್ವದ ಭದ್ರಕೋಟೆ ಎಂದು ಕರೆಸಿಕೊಳ್ಳುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಸೋಲನ್ನು ಕಾಣಬೇಕಾಯಿತು.

ಬಿಜೆಪಿ ಸೋತದಲ್ಲದೆ ಹಿಂದು ಕಾರ್ಯಕರ್ತರ ನೆಚ್ಚಿನ ನಾಯಕ ಪುತ್ತೂರಿನ ಹಿಂದುತ್ವದ ಫೈಯರ್ ಬ್ರಾಂಡ್ ಅರುಣ್ ಕುಮಾರ್ ಪುತ್ತಿಲ ರವರನ್ನು ಸೋಲಿಸಿಕೊಂಡು ಬಂದರು. ಬಿಜೆಪಿ ಅಭ್ಯರ್ಥಿ ಗಿಂತ 100 ಪಟ್ಟು ಜನಬೆಂಬಲ ದೊರೆತ ಅರುಣ್ ಕುಮಾರ್ ಪುತ್ತಿಲರ ವಿರುದ್ಧ ವ್ಯವಸ್ಥಿತವಾಗಿ ಮಾಡಿದ ಅಪಪ್ರಚಾರ ಇಬ್ಬರ ಜಗಳ ಮೂರನೆಯವನಿಗೆ ಲಾಭ ಎಂಬಂತೆ ಕಾಂಗ್ರೆಸ್ ಅಭ್ಯರ್ಥಿಗೆ ಜಯ ತಂದು ಕೊಟ್ಟಿತ್ತು.

ಬಿಜೆಪಿ ಕೈ ಬಿಟ್ಟರು ಹಿಂದುತ್ವ ಪುತ್ತಿಲರನ್ನು ಕೈ ಬಿಡಲಿಲ್ಲ! ಲೋಕಸಭೆಗೆ ಪುತ್ತಿಲ ಇದು ಕಾರ್ಯಕರ್ತರ ಅಭಿಯಾನ.  

ಪುತ್ತೂರಿಗೆ ಪುತ್ತಿಲ ಎಂಬ ಘೋಷ ವಾಕ್ಯದೊಂದಿಗೆ ಕಳೆದ ಎರಡು ಮೂರು ವರ್ಷಗಳಿಂದ ನಿರಂತರವಾಗಿ ಹಿಂದೂ  ಕಾರ್ಯಕರ್ತರು ಅಭಿಯಾನ ನಡೆಸಿದ್ದರು. ಪುತ್ತೂರಿಗೆ ಪುತ್ತಿಲ ಎಂಬ ಘೋಷ ವಾಕ್ಯವನ್ನು ಬಿಜೆಪಿ ರಾಜ್ಯಾಧ್ಯಕ್ಷರು ತನ್ನ ತವರಿನಲ್ಲಿ ನಿರ್ಲಕ್ಷ ಮಾಡಿದ ಪರಿಣಾಮ ಅಶೋಕ್ ಕುಮಾರ್ ರೈ ಪುತ್ತೂರಿನಲ್ಲಿ ಲಕ್ಕಿ ಸ್ಟಾರ್ ಆಗಿ ಹೊರಹೊಮ್ಮಿದರು.

ಪ್ರವೀಣ್ ನೆಟ್ಟಾರು ಹತ್ಯೆಯ ಆರೋಪಿ ಇಸ್ಮೈಲ್ ಶಾಪಿ ಎಂಬವರು ಚುನಾವಣೆ ಕಣದಲ್ಲಿ ಇದ್ದರೂ ಬಿಜೆಪಿ ಅಭ್ಯರ್ಥಿ ಆಯ್ಕೆಯಲ್ಲಿ ಎಡವಟ್ಟು ಮಾಡಿತು. ಇಂದು ಕಾರ್ಯಕರ್ತರನ್ನು ನಿರ್ಲಕ್ಷ್ಯ ಮಾಡಿದರೆ ಕರಾವಳಿಯಲ್ಲಿ ಹಿಂದೂ ಕಾರ್ಯಕರ್ತರಿಂದಲೇ ನಾಯಕ, ಬರೀ ನಾಯಕನಿಂದ ಯಾವತ್ತು ಪಕ್ಷ ಗೆಲ್ಲಲ್ಲ ಎಂಬುದನ್ನು ಜನರು ತೋರಿಸಿಕೊಟ್ಟಿದ್ದಾರೆ.

ಕರಾವಳಿಯಲ್ಲಿ ಅನ್ಯ ಧರ್ಮೀಯರಿಗೆ ಸಿಂಹ ಸ್ವಪ್ನ ರಾಗಿದ್ದ ಡಾಕ್ಟರ್ ಪ್ರಭಾಕರ್ ಭಟ್ ಅವರಂತಹ ವ್ಯಕ್ತಿಗಳನ್ನು ಬಿಜೆಪಿ ಬಳಸಿ ಅವರ ಬಳಿ ಅಪಪ್ರಚಾರ ಮಾಡಿಸಿ ಸಂಘದ ನಾಯಕರುಗಳ ಬಗ್ಗೆ ಸಾಮಾನ್ಯ ಕಾರ್ಯಕರ್ತರಿಗೆ ಕೀಳರಿಮೆ ಬರುವ ಹಾಗೆ ಮಾಡಿಬಿಟ್ಟದ್ದು ವಿಪರ್ಯಾಸವಾಗಿದೆ.

ನ್ಯಾಯ ನೀತಿ ಧರ್ಮಗಳಲ್ಲಿ ನಂಬಿಕೆ ಇರಿಸಿ ಪುತ್ತಿಲ ಎಂಬ ಫ್ರೆಂಡ್ ಅನ್ನು, ಪುತ್ತಿಲರು ಒಂದು ರೂಪಾಯಿ ಹಣ ಹಂಚದೇ, ರಾಜಕೀಯ ಬೆಂಬಲ ಮತ್ತು ಸೀರೆ ಕುಕ್ಕರ್ ಹೆಂಡ ಹಂಚದೇ ರಾಜ್ಯಾದ್ಯಂತ ಗುರುತಿಸುವಂತೆ ಮಾಡಿರುವುದು ಹಿಂದುತ್ವದ ಸಾಧನೆಯಾಗಿದೆ.

ಚುನಾವಣಾ ಫಲಿತಾಂಶದಲ್ಲಿ ಸಂಖ್ಯೆಗಳಿಗೆ ಸೋಲಾಗಿದೆ ವಿನಹ ಹಿಂದುತ್ವಕ್ಕೆ ಸೋಲಾಗಲಿಲ್ಲ ಬದಲಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಹಿಂದೂ ಕಾರ್ಯಕರ್ತರು ಪುತ್ತಿಲರ ನಾಯಕತ್ವದಲ್ಲಿ ಒಗ್ಗಟ್ಟಾಗಿ ಸಂಘಟನೆ ಮಾಡಬಹುದು ಎಂಬುದು ಸಾಬೀತಾಗಿದೆ.

ಪಕ್ಷದ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕಿದ ಕಾರ್ಯಕರ್ತರಿಗೆ ಮೃಗಗಳಿಗೆ ಹೊಡೆದಂತೆ ಹೊಡೆಸಿದ ಪುತ್ತೂರಿನ ನಾಲಾಯಕ ನಾಯಕರು 

ಪುತ್ತೂರು ವಿಧಾನಸಭಾ ಚುನಾವಣೆಯ ಸೋಲಿನ ನಂತರ ಪಕ್ಷದ ನಾಯಕರ ಮೇಲೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ ಸಂಘದ ಸಕ್ರಿಯ ಕಾರ್ಯಕರ್ತರಿಗೆ ಠಾಣೆಯಲ್ಲಿ ಕೂಡಿ ಹಾಕಿ ದರ್ಪ ಮೆರೆದ ಪೊಲೀಸ್ ಮತ್ತು ಪ್ರೇರಣೆ ನೀಡಿದ ನಾಲಾಯಕ ನಾಯಕರ ವಿರುದ್ಧ ಕರ್ನಾಟಕದಾದ್ಯಂತ ಕಾರ್ಯಕರ್ತರ ಕ್ಕೆ ಕಾರಣವಾಗಿದೆ.

ಬಿಜೆಪಿ ರಾಜ್ಯಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡರ ಭಾವಚಿತ್ರವಿರುವ ಬ್ಯಾನರ್ ಅನ್ನು ಪುತ್ತೂರು ಬಸ್ ಸ್ಟ್ಯಾಂಡ್ ಮುಂಭಾಗದಲ್ಲಿ ಚಪ್ಪಲಿ ಹಾರಗಳನ್ನು ಹಾಕಿ ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಡಿವಿ ಸದಾನಂದ ಗೌಡ ಮತ್ತು ನಲೀನ್ ಕುಮಾರ್ ಕಟೀಲು ಕಾರಣ ಎಂದು ನೊಂದ ಕಾರ್ಯಕರ್ತರು  ಬ್ಯಾನರ್ ಅಳವಡಿಸಿದ್ದರು.

ಬ್ಯಾನರ್ ಅಳವಡಿಸಿದ್ದ ಕಾರ್ಯಕರ್ತರನ್ನು ಪೊಲೀಸ್ ಠಾಣೆಗೆ ಕರೆಸಿ, ಮುಚ್ಚಳಿಕೆ ಬರೆದು ಕಳುಹಿಸುವ ಪ್ರಕರಣವಾಗಿದ್ದ ಈ ಪ್ರಕರಣದಲ್ಲಿ ಪುತ್ತೂರಿನ dysp ಮತ್ತು ಕಾನ್ಸ್ಟೇಬಲ್ ಹರ್ಷಿತ್ ಇವರಿಬ್ಬರು ಕಾರ್ಯಕರ್ತರಾದ ಅವಿನಾಶ್ ಮತ್ತು ಸ್ನೇಹಿತರನ್ನು ಮಧ್ಯರಾತ್ರಿ ಕರೆದುಕೊಂಡು ಹೋಗಿ dysp ಕಚೇರಿಯಲ್ಲಿ ಮಾರಣಾಂತಿಕವಾಗಿ ಹಲ್ಲೆ ಮಾಡಲು ಬಿಜೆಪಿ ನಾಯಕರಿಬ್ಬರ ಒತ್ತಡವೇ ಕಾರಣ ಎಂಬುದು ಕಾರ್ಯಕರ್ತರ ಆರೋಪವಾಗಿದೆ.

ಮಾರಣಾಂತಿಕವಾಗಿ ಹಲ್ಲೆಗೊಳಗಾದ ಕಾರ್ಯಕರ್ತರನ್ನು ಮಧ್ಯರಾತ್ರಿ ಬಿಡಿಸಿ ಕರೆತಂದ ಅರುಣ್ ಕುಮಾರ್ ಪುತ್ತಿಲ 

ಪುತ್ತೂರಿನ ಚುನಾವಣೆಯಲ್ಲಿ ಸೋಲಿನ ಅಂತರ ಕಾರ್ಯಕರ್ತರೊಂದಿಗೆ ಡಿ ವೈ ಎಸ್ ಪಿ ಕಚೇರಿಗೆ ವಕೀಲರೊಂದಿಗೆ ತೆರಳಿ ಠಾಣೆಯಿಂದ ಕರೆತಂದು ಬಿಟ್ಟ ಅರುಣ್ ಕುಮಾರ್ ಪುತ್ತಿಲರ ಈ ನಡೆ ಕಾರ್ಯಕರ್ತರ ಪ್ರೀತಿಗೆ ಕಾರಣವಾಗಿದೆ.

ಹಲ್ಲೆಗೊಳಗಾದ ಅವಿನಾಶ್ ಎಂಬುವವರ ಹೇಳಿಕೆಯ ಪ್ರಕಾರ ಅರುಣ್ ಕುಮಾರ್ ಪುತ್ತಿಲರು ಮಧ್ಯರಾತ್ರಿ ಬರುತಿಲ್ಲದಿದ್ದರೆ ನಾವು 11 ಜನ ಲಾಕಪ್ ಡೆತ್ ಆಗಿ ಬಿಡುತ್ತಿದ್ದೆವು ಎಂಬ ಮಾತು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಬಸವನಗೌಡ ಯತ್ನಾಳ್ ಆಸ್ಪತ್ರೆಗೆ ಬೇಟಿ 

ಕಾರ್ಯಕರ್ತರ ಯೋಗ ಕ್ಷೇಮ ವಿಚಾರಿಸಲು ಬಾರದಿರುವ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಅವರ ನಡೆ ಏನು ಎಂಬ ಪ್ರಶ್ನೆ ಸದ್ಯ ಪುತ್ತೂರಿನಲ್ಲಿ ಮೂಡುತ್ತಿದೆ.

ಹಿಂದೂ ಫೈಯರ್ ಬ್ರಾಂಡ್, ವಿಜಯಪುರದ ಹುಲಿ ಬಸವನಗೌಡ ಪಾಟೀಲ್ ಅವರು ಹಲ್ಲೆಗೊಳಗಾದ ಕಾರ್ಯಕರ್ತರ ಯೋಗಕ್ಷೇಮ ವಿಚಾರಿಸಿ ಇಲ್ಲಿ ನಡೆದಿರುವ ವಿಷಯವನ್ನು ರಾಷ್ಟ್ರ ನಾಯಕರಿಗೆ ಮುಟ್ಟಿಸುವುದಾಗಿ ಮತ್ತು ಮುಂದಿನ ಹದಿನೈದು ದಿನದಲ್ಲಿ ರಾಜ್ಯ ಬಿಜೆಪಿಯಲ್ಲಿ ದೊಡ್ಡ ಬದಲಾವಣೆ  ಬರಲಿದೆ ಎಂದು ತಿಳಿಸಿದರು. ಗಾಯಗೊಂಡ ಕಾರ್ಯಕರ್ತ ಅವಿನಾಷ್ ಅವರಿಗೆ ವಯಕ್ತಿಕ ಒಂದು ಲಕ್ಷ ಪರಿಹಾರ ನೀಡಿದರು.

ಬಸವನ ಗೌಡ ಯತ್ನಲ್ ಅವರ ಭೇಟಿ ವೇಳೆ ಪುತ್ತಿಲರು ದುಃಖದಿಂದ ಕಾರ್ಯಕರ್ತರ ಮೇಲೆ ನಡೆದ ಈ ಮಾರಣಾಂತಿಕ ಹಳ್ಳೆಯ ಬಗ್ಗೆ ಯತ್ನಾಳ್ ಅವರ ಬಳಿ ತಮ್ಮ ನೋವನ್ನು ತೋಡಿಕೊಂಡರು. ಪುತ್ತೂರಿನಲ್ಲಿ ನಡೆಯುತ್ತಿರುವ ಈ ಎಲ್ಲಾ ಬೆಳವಣಿಗೆಗಳನ್ನು ಎದುರಿಸುತ್ತಿರುವ ಪುತ್ತಿಲ ರನ್ನು ನೋಡಿದಾಗ ಪುತ್ತೂರಿಗೆ ಹಿಂದುತ್ವಕ್ಕೆ ದುಡಿಯುವ ಮಾಣಿಕ್ಯವೊಂದು ಇದ್ದರೆ ಅದು ಅರುಣ್ ಕುಮಾರ್ ಪುತ್ತಿಲ ಎಂಬುದು ದೃಢವಾಗಿ ಕಾಣುತ್ತದೆ.

ಇನ್ನುಳಿದಂತೆ ಸುಳ್ಯ ವಿಧಾನಸಭಾ ಕ್ಷೇತ್ರದ ನೂತನ ಎಂಎಲ್ಎ ಭಾಗೀರತಿ ಮುರುಲ್ಯ, ಪುತ್ತೂರಿನ ಪರಾಜಿತ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ , ಚಕ್ರವರ್ತಿ ಸೂಲಿಬೆಲೆ, ಪ್ರಮೋದ್ ಮುತಲಿಕ್,ಹರೀಶ್ ಪೂಂಜಾ ಬೇಟಿ ನೀಡಿದ್ದಾರೆ.

ಹಲ್ಲೆಗೊಳಗಾದ ಕಾರ್ಯಕರ್ತನ ಹರಿದ ಕಿವಿ ತಮಟೆ.

ಪೋಲಿಸ್ ವಿಚಾರಣೆ ನೆಪದಲ್ಲಿ ಪೊಲೀಸ್ ಠಾಣೆಗೆ ಕರೆದೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕಾರ್ಯಕರ್ತರನ್ನು ಅಮಾನುಷವಾಗಿ ನಡೆಸಿದ ಘಟನೆಯಿಂದಾಗಿ ಕಾರ್ಯಕರ್ತ ಅವಿನಾಶ್ ಅವರ ಕಿವಿಯ ತಮಟೆ, ಹರಿದು ಹೋಗಿರುವುದು ವೈದ್ಯಕೀಯ ಪರೀಕ್ಷೆಯ ವೇಳೆ ದೃಡಪಟ್ಟಿದೆ.

ವಾರವಾದರೂ ಕಿವಿಯ ನೋವು ಕಡಿಮೆಯಾಗದಿರುವುದರಿಂದ ವೈದ್ಯರ ಶಿಫಾರಸಿನ ಮೇರೆಗೆ ವೇದಿಕೆಯ ಪರೀಕ್ಷೆ ಮಾಡಿದಾಗ ಕಿವಿಯ ತಮಟೆ ಹರಿದಿರುವುದು ದೃಢಪಟ್ಟಿದೆ ಮತ್ತು ಇದರ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

ವೈದ್ಯಕೀಯ ವರದಿ ಹೊರಬೀಳುತ್ತಿದ್ದಂತೆ ಹಿಂದೂ ನಾಯಕ ಅರುಣ್ ಕುಮಾರ್ ಪುತ್ತಿಲರು ಮಂಗಳೂರಿನಲ್ಲಿ ಪೊಲೀಸ್ ಕಮಿಷನರ್ ಅವರನ್ನು ಭೇಟಿ ಮಾಡಿ ತಪ್ಪಿತಸ್ಥ ಪೊಲೀಸ ಅಧಿಕಾರಿಯನ್ನು ಅಧಿಕಾರದಿಂದ ವಜಾ ಮಾಡಿ ಸಂತ್ರಸ್ತ ಯುವಕನಿಗೆ 5 ಲಕ್ಷಗಳ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಈ ಘಟನೆ ಇನ್ನು ಮುಂದೆ ಯಾವ ರೀತಿ ಸಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Leave a Comment