ತಂದೆ PSI ಆಗಿದ್ದ ಠಾಣೆಗೆ ಈಗ ಮಗಳು PSI!

ಮಂಡ್ಯ: ತಂದೆ PSI ಆಗಿದ್ದ ಪೊಲೀಸ್ ಠಾಣೆಗೆ ನೂತನ ಪಿಎಸ್ಐ ಆಗಿ ತಂದೆಯಿಂದ ಮಗಳಿಗೆ ಅಧಿಕಾರ ಸ್ವೀಕಾರಗೊಂಡ ಅಪರೂಪದ ಕ್ಷಣಕ್ಕೆ ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆ ಸಾಕ್ಷಿಯಾಗಿದೆ.

ನಾನು ಏನೇ ಆಗಿದ್ದರು ಅದಕ್ಕೆ ತಂದೆ ತಾಯಿಯೇ ಕಾರಣ; PSI ವರ್ಷ 

ನಾನು ಏನೇ ಮಾಡಿದರು ನನ್ನ ತಂದೆ ತಾಯಿಯೇ ಕಾರಣ, ಮಕ್ಕಳಿಗೆ ನಾನು ಹೇಳುವ ಒಂದು ಮಾತೇನೆಂದರೆ ತಂದೆ ತಾಯಿ ತಮ್ಮ ಮಕ್ಕಳ ಬಳಿ ತಮ್ಮ ಕಷ್ಟಗಳನ್ನು ಹೇಳಿಕೊಳ್ಳುವುದಿಲ್ಲ ಹಾಗಾಗಿ ನಾವು ಅವರ ಬಳಿ ಅದು ಬೇಕು ಇದು ಬೇಕು ಎಂದು ಕೇಳುವ ಬದಲು ತಂದೆ ತಾಯಿಗೆ ಖುಷಿಯಾಗಿರಲು ಏನು ಮಾಡಬೇಕು ಎಂಬುದನ್ನು ಅರಿತುಕೊಳ್ಳಬೇಕು ಎಂದು ನೂತನ psi ವರ್ಷ ಅವರು ಹೇಳಿದರು.

ಮಾಜಿ ಮಿಲಿಟರಿ ಮ್ಯಾನ್ ಈಗ ಪೊಲೀಸ್ ಸಬ್ ಇನ್ಸ್ಪೆಕ್ಟರ್ 

ಪೊಲೀಸ್ ಸಬ್ ಇನ್ಸ್ಪೆಕ್ಟರ್ ವೆಂಕಟೇಶ್ ಅವರು ಕಡು ಬಡತನದಿಂದ ಮಿಲಿಟರಿ ಇಲಾಖೆಗೆ ಆಯ್ಕೆಯಾಗಿದ್ದರು. ನಂತರ ಸೇನೆಯಲ್ಲಿ 16 ವರ್ಷಗಳ ಕಾಲ ಕೆಲಸವನ್ನು ಮಾಡಿದ್ದರು ಮತ್ತು ಮಿಲಿಟರಿ ಕೋಟದ ಅಡಿಯಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪರೀಕ್ಷೆ ಬರೆದು ಆಯ್ಕೆಯಾದರು. ಮಿಲಿಟರಿ ಸೇವೆ ಸಮಯದಲ್ಲಿ ಚೈನಾ, ಬಾಂಗ್ಲಾದೇಶ, ಪಾಕಿಸ್ತಾನ ಗಡಿ ಭಾಗಗಳಲ್ಲಿ ಕೆಲಸ ಮಾಡಿದ ಅವರು ಕಾರ್ಗಿಲ್ ಯುದ್ಧದ ಸಮಯದಲ್ಲಿ ಭಾಗವಹಿಸಿದ್ದರು.

ಟ್ಯೂಷನ್ ಹೋಗದೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪರೀಕ್ಷೆ ಪಾಸ್ ಮಾಡಿದ ವರ್ಷ 

ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ವರ್ಷ ಅವರು ಮನೆಯಲ್ಲಿ ಪರೀಕ್ಷೆಗೆ ತಯಾರಿ ಮಾಡಿ 2022ನೇ ಬ್ಯಾಚ್ನಲ್ಲಿ ಪರೀಕ್ಷೆ ಬರೆದು ಆಯ್ಕೆಯಾಗಿದ್ದರು ಮತ್ತು ಕಳೆದ ಒಂದು ವರ್ಷದಿಂದ ಪ್ರೊಬೇಷನರಿ ಹುದ್ದೆಯಲ್ಲಿ ಇದ್ದ ಅವರು ತಂದೆಯಿಂದ ಪೊಲೀಸ್ ಸಬ್ಇನ್ಸ್ಪೆಕ್ಟರ್ ಆಗಿ ಅಧಿಕಾರ ಸ್ವೀಕಾರ ಮಾಡಿದರು.

 

Leave a Comment