ಹುಟ್ಟು ಹಬ್ಬದ ಖುಷಿಯಲ್ಲಿ ರೌಡಿ ಬೇಬಿ ಸಾಯಿ ಪಲ್ಲವಿ. Sai Pallavi

2015ರಲ್ಲಿ ಮಲಯಾಳಂ ಪ್ರೇಮ್ ಚಿತ್ರದಿಂದ ನ್ಯಾಷನಲ್ ಕ್ರಶ್ ಆಗಿದ್ದ ಬಹುಭಾಷಾ ಬೆಡಗಿ ಸಾಯಿ ಪಲ್ಲವಿ (Sai Pallavi) ಅವರು ಇಂದು ಹುಟ್ಟು ಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಸಾಯಿ ಪಲ್ಲವಿ ಸದ್ಯ ದಕ್ಷಿಣ ಭಾರತದ ಹುಡುಗರ ಫೇವರೆಟ್ ನಟಿ.
ದಕ್ಷಿಣ ಭಾರತದಲ್ಲಿ ಇವರ ಹೆಸರು ಕೇಳದವರೆ ಇಲ್ಲ, ಅಷ್ಟೊಂದು ಪ್ರಖ್ಯಾತಿ ಗಳಿಸಿದ ಇವರು ಚಿತ್ರರಂಗಕ್ಕೆ ಕಾಲಿಟ್ಟ ಆರು ವರ್ಷಗಳಲ್ಲಿ ಮೂರು ಫಿಲಂ ಫೇರ್ ಅವಾರ್ಡ್ ಮತ್ತು ಇತರ ಬೇರೆ ಬೇರೆ ಅವಾರ್ಡ್ ಗಳನ್ನು ಪಡೆದಿದ್ದಾರೆ. ತಮಿಳಿನ ಧನುಷ್ ಅವರ ಮಾರಿ 2 ಚಿತ್ರದಲ್ಲಿ ರೌಡಿ ಬೇಬಿ ಎಂದೇ ಪ್ರಸಿದ್ಧರಾಗಿದ್ದ ಇವರು ಡ್ಯಾನ್ಸಿಂಗ್ ಕ್ವೀನ್ ಎಂದೇ ಅಭಿಮಾನಿಗಳಿಂದ ಗುರುತಿಸಲ್ಪಟ್ಟಿದ್ದಾರೆ. ಸಾಯಿ ಪಲ್ಲವಿ ಅವರ ಜೀವನದ ಕಥೆಯನ್ನು ಈ ಕೆಳಗೆ ತಿಳಿಸಿಕೊಡಲಾಗಿದೆ.

ಸಾಯಿ ಪಲ್ಲವಿ

Sai Pallavi ಅವರ ಬಾಲ್ಯ ಜೀವನ ಸಾಯಿ ಪಲ್ಲವಿಹೇಗಿತ್ತು?

ತಮಿಳುನಾಡಿನವರಾದ ಸಾಯಿ ಪಲ್ಲವಿ ಅವರು 1992 ಮೇ 9ರಂದು ಅಲ್ಲಿನ ಕೋಟಗಿರಿಯಲ್ಲಿ Senthamarai Kannan ಮತ್ತು ರಾಧಾ ಎಂಬುವರ ಮಗಳಾಗಿ ಜನಿಸಿದರು. ಇವರು ಪೂಜಾ ಎಂಬ ಸಹೋದರಿಯನ್ನು ಕೂಡ ಹೊಂದಿದ್ದಾರೆ. ಇವರ ತಾಯಿ ಸಾಯಿ ಬಾಬಾರ ಭಕ್ತರಾಗಿದ್ದ ಕಾರಣ ಇವರಿಗೆ ಸಾಯಿ ಪಲ್ಲವಿ ಎಂಬ ಹೆಸರು ಇಟ್ಟಿದ್ದರು.

ತಮಿಳುನಾಡಿನಲ್ಲಿ ಹುಟ್ಟಿದ್ದು ಆದರೂ ತೆಲುಗು ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿ ಮತ್ತು ಅತಿ ಹೆಚ್ಚು ಬೇಡಿಕೆ ಉಳ್ಳ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಸಾಯಿ ಪಲ್ಲವಿ ಅವರಿಗೆ ಅವರ ತಾಯಿಯೇ ಡ್ಯಾನ್ಸ್ ನಲ್ಲಿ ಮೊದಲ ಗುರುವಾಗಿದ್ದಾರೆ ಹಾಗೂ ತಮ್ಮ ಶಾಲಾ ದಿನಗಳಲ್ಲಿ ಡ್ಯಾನ್ಸ್ ಚಟುವಟಿಕೆಯಲ್ಲಿ ತಮ್ಮನ್ನು ತಾವು ಹೆಚ್ಚು ತೊರಗಿಸಿಕೊಂಡಿದ್ದರು.

ಸಾಯಿ ಪಲ್ಲವಿ ಅವರ ಸಿನಿ ಪಯಣ

ಸಾಯಿ ಪಲ್ಲವಿ ಅವರು ಪೂರ್ಣ ಪ್ರಮಾಣದ ನಟಿಯಾಗುವ ಮುನ್ನ ಕೆಲ ಚಿತ್ರದಲ್ಲಿ ಬಹಳ ನಟಿಯಾಗಿ ಮತ್ತು ಸಹ ನಟಿಯಾಗಿ ನಟನೆ ಮಾಡಿದ್ದರು. ಅವರ ನಟನೆಯ ಮೊಟ್ಟ ಮೊದಲ ಚಿತ್ರ ಕಸ್ತೂರಿ ಮಾನನ್.  2008ರಲ್ಲಿ ಪಿಯುಸಿ ವಿದ್ಯಾರ್ಥಿನಿಯಾಗಿದ್ದಾಗ ಬಾಲಿವುಡ್ ನಟಿ ಕಂಗನ ಅವರ ಜೊತೆ ಸಣ್ಣ ಪಾತ್ರ ಮಾಡಿದ್ದರು.

ಸಾಯಿ ಪಲ್ಲವಿ ಅವರಿಗೆ ನೃತ್ಯದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಹಂಬಲ ಹೊಂದಿದ್ದ ಅವರು ಈಟಿವಿ ತಮಿಳುನಲ್ಲಿ ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸಿದ್ದರು. The ultimate dance show ಎಂಬ ತಮಿಳು ಡ್ಯಾನ್ಸ್ ಶೋ ಆವೃತ್ತಿ 4 ರಲ್ಲಿ ಫೈನಲಿಸ್ಟ್ ಹಾಗೆ ಹೊರಹೊಮ್ಮಿದರು.

ಸಾಯಿ ಪಲ್ಲವಿ ಅವರು ಮೆಡಿಕಲ್ ಓದುತ್ತಿರುವಾಗಲೇ ಮಲಯಾಳಂನ premam ಚಿತ್ರಕ್ಕೆ ಆಯ್ಕೆಯಾಗಿ ಪೂರ್ಣ ಪ್ರಮಾಣದ ನಟಿಯಾಗಿ ಮಲಯಾಳಂನಿಂದ ಚಲನಚಿತ್ರಕ್ಕೆ ಪಾರ್ಧಾರ್ಪಣೆ ಮಾಡಿದರು. Premam ಚಿತ್ರದ ತಮ್ಮ ನಟನೆ ಇಡೀ ದೇಶವೇ ಗುರುತಿಸುವಂತೆ ಮಾಡಿತ್ತು. 2016 ರಲ್ಲಿ ಓದಿಗೆ ಒಂದು ತಿಂಗಳು ವಿರಾಮ ತೆಗೆದುಕೊಂಡು ಕಲಿ ಚಿತ್ರದಲ್ಲಿ ಅಭಿನಯಿಸಿದರು, ಆ ಚಿತ್ರವು ಕೂಡ ಸೂಪರ್ ಹಿಟ್ ಆಗಿ ಹೊರ ಹೊಮ್ಮಿತು. ತಮ್ಮ ಮೊದಲೆರಡು ಚಿತ್ರಗಳು ಸೂಪರ್ ಹಿಟ್ ಆದ ನಂತರ ಎರಡು ಚಿತ್ರಕ್ಕೂ ಫಿಲಂ ಫೇರ್ ಅವಾರ್ಡ್ ಪಡೆದುಕೊಂಡರು.

2017ರಲ್ಲಿ ಸಾಯಿ ಪಲ್ಲವಿ ಅವರಿಗೆ ತೆಲುಗಿನಿಂದ ಭರ್ಜರಿ ಅವಕಾಶಗಳು ಅವರನ್ನು ಹುಡುಕಿಕೊಂಡು ಬಂದವು, ಆ ವರ್ಷ ತೆರೆ ಕಂಡ ಫಿದಾ ಚಿತ್ರ ಅವರಿಗೆ ಹೆಚ್ಚು ಖ್ಯಾತಿಗಂದು ಕೊಟ್ಟಿದ್ದು ಮತ್ತು ತಲುಗಿನಲ್ಲಿ ಅವರಿಗೆ ಮೊದಲ ಫಿಲಂ ಫೇರ್ ಅವಾರ್ಡ್ ತಂದು ಕೊಟ್ಟಿತ್ತು.

ತಮಿಳಿನಲ್ಲಿ ಬಂದ ಧನುಷ್ ರವರ ಮಾರಿ 2 ಚಿತ್ರದಲ್ಲಿ ನಟಿಸಿದ ಅವರು ಆ ಚಿತ್ರದಲ್ಲಿ ಹಿಟ್ ಆಗಿದ್ದ ರೌಡಿ ಬೇಬಿ ಎಂಬ ಸಾಂಗ್ ಗೆ ಮಾಡಿದ ಡ್ಯಾನ್ಸ್ ಯೂಟ್ಯೂಬ್ ನಲ್ಲಿ ನೂರು ಕೋಟಿಗೂ ಹೆಚ್ಚು ವೀಕ್ಷಣೆಯನ್ನು ಪಡೆದುಕೊಂಡು ಒಂದು ದೊಡ್ಡ ಮೈಲಿಗಲ್ಲು ಸೃಷ್ಟಿ ಮಾಡಿತ್ತು.

ಅವಕಾಶಗಳು ಇಲ್ಲದಿದ್ದರೂ ಪರವಾಗಿಲ್ಲ ತುಂಡು ಉಡುಗೆ ಮತ್ತು ಮೇಕಪ್ ಹಾಕಿ ಅಭಿನಯ ಮಾಡುವುದಿಲ್ಲ ಎಂಬ ಅವರ ನಿರ್ಧಾರ ಎಲ್ಲರನ್ನೂ ಬೇರಗುಗೊಳ್ಳುವಂತೆ ಮಾಡಿತ್ತು. ಈ ನಿರ್ಧಾರ ಅವರ ಅಭಿಮಾನಿಗಳಿಗೆ ಖುಷಿ ಉಂಟು ಮಾಡಿತ್ತು.

ಸಾಯಿ ಪಲ್ಲವಿ ಅವರ ವಿದ್ಯಾಭ್ಯಾಸ

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಅವರು ತಮಿಳುನಾಡಿನಲ್ಲಿ ಮಾಡಿದ್ದಾರೆ. ಸಾಯಿ ಪಲ್ಲವಿ ಅವರು ಜೊತೆಯಲ್ಲಿ ದೂರದ ಜಾರ್ಜಿಯ ದೇಶದ ವಿಶ್ವವಿದ್ಯಾನಿಲಯದಿಂದ ಎಂಬಿಬಿಎಸ್ ಪದವಿಯನ್ನು ಪಡೆದಿದ್ದಾರೆ, ಆದರೆ ಈವರೆಗೂ ಯೂನಿಯನ್ ನಲ್ಲಿ ತಮ್ಮ ಪದವಿಯನ್ನು ವಂದನೆ ಮಾಡಿಕೊಂಡಿಲ್ಲ. ತಮ್ಮ ಪೂರ್ಣ ಪ್ರಮಾಣದ ಮೊದಲೆರಡು ಚಿತ್ರಗಳನ್ನು ಎಂಬಿಬಿಎಸ್ ಪದವಿ ಓದುತ್ತಲೇ ನಟಿಸಿ ಆ ಚಿತ್ರಗಳು ಸೂಪರ್ ಹಿಟ್ ಆಗಿದ್ದವು.

ಸಾಯಿ ಪಲ್ಲವಿ ಅವರ ಮಾತೃಭಾಷೆ ಬಡಗು!

ತಮಿಳುನಾಡಿನ ನೀಲಗಿರಿಯ ಪ್ರದೇಶದಲ್ಲಿ ಹೆಚ್ಚಾಗಿ ಮಾತನಾಡುವ ಬಡಗು ಭಾಷೆ ಕನ್ನಡ ಭಾಷೆಯ ಉಪನುಡಿಯಾಗಿದೆ. ಸಾಯಿ ಪಲ್ಲವಿ ಅವರ ಕುಟುಂಬಸ್ಥರು ಬಡಗುಬಾಷೆಯಲ್ಲಿ ಮಾತನಾಡುತ್ತಾರೆ ಮತ್ತು ಬಡಗು ಭಾಷೆಗೆ ಕನ್ನಡದ ಸಾಮ್ಯತೆ ಇರುವುದನ್ನು ತಮ್ಮ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದರು.

ಸಾಯಿ ಪಲ್ಲವಿ ಅವರ ವಿವಾದಗಳು 

ಭಾರತೀಯ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಪ್ರೆಮಮ್ ಚಿತ್ರದಿಂದ ನ್ಯಾಷನಲ್ ಕ್ರಶ್ ಪಟ್ಟವನ್ನು  ಅಭಿಮಾನಿಗಳಿಂದ ಪಡೆದಿದ್ದ ಸಾಯಿ ಪಲ್ಲವಿ ಯವರು ವಿವಾದಕ್ಕೆ ಅವರು ಆಡಿದ ಮಾತು ಕಾರಣವಾಗಿತ್ತು.

ಯಾವಾಗಲೂ ಪಾಸಿಟಿವ್ ಆಗಿ ಗುರ್ತಿಸಿಕೊಳ್ಳುತ್ತಿದ್ದ ಸಾಯಿ ಪಲ್ಲವಿ ಅವರು ವಿರಾಟ ಪರ್ವ ಚಿತ್ರದ ಪ್ರಮೋಷನ್ ಸಮಯದಲ್ಲಿ ಸಂದರ್ಶನ ಒಂದರಲ್ಲಿ ನಿರೂಪಕಿ ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ಆಡಿದ ಮಾತು ವಿವಾದಕ್ಕೆ ಕಾರಣವಾಗಿತ್ತು.

ರಾಜಕೀಯದ ಬಗ್ಗೆ ನಿಮ್ಮ ಸಿದ್ದಾಂತವೇನು ಎಂದು ಸಂದರ್ಶನ ಒಂದರಲ್ಲಿ ಕೇಳಿದ ಪ್ರಶ್ನೆಗೆ ಸಾಯಿ ಪಲ್ಲವಿ ಅವರು ನನಗೆ ಯಾವುದೇ ಸಿದ್ಧಾಂತವಿಲ್ಲ, ಎಡ ಬಲ, ಹಿಂದು ಮುಸ್ಲಿಂ ಎಂಬೆಲ್ಲ ವಿಚಾರಗಳಲ್ಲಿ ನನಗೆ ನಂಬಿಕೆ ಇಲ್ಲ, ನನಗೆ ನನ್ನ ಮನೆಯಲ್ಲಿ ಸಂಸ್ಕಾರವನ್ನು ನೀಡಿದ್ದಾರೆ ಮತ್ತು ನಾನು ಆ ಸಂಸ್ಕಾರವನ್ನು ಪಾಲಿಸುತಿದ್ದೇನೆ ಎಂದು ಹೇಳಿದ್ದರು.

ಅವರು ಈ ಮೇಲಿನ ಮಾತಿನ ಮಾತಿನ ಜೊತೆಗೆ ಒಂದು ಹೆಜ್ಜೆ ಮುಂದೆ ಹೋಗಿ ಜೈ ಶ್ರೀ ರಾಮ್ ಎಂದು ಘೋಷಣೆ ಕೂಗಿಕೊಂಡು ದನವೊಂದನ್ನು ಕೊಂಡೊಯ್ಯುತ್ತಿದ್ದ ವ್ಯಕ್ತಿಯನ್ನು ಕೊಂದವರಿಗೂ ಕಾಶ್ಮೀರಿ ಪಂಡಿತರನ್ನು ಕೊಂದವರಿಗೆ ಯಾವುದೇ ವ್ಯತ್ಯಾಸವಿಲ್ಲ ಮತ್ತು ಧರ್ಮದ ಹೆಸರಿನಲ್ಲಿ ಕೊಲೆ ಮಾಡುವುದು ಸರಿಯಲ್ಲ, ಧರ್ಮಕ್ಕಿಂತ ಮಾನವೀಯತೆ ಮುಖ್ಯ ಎಂದು ನೀಡಿದ ಉತ್ತರ ದೇಶಾದ್ಯಂತ ವಿವಾದಕ್ಕೆ ಕಾರಣವಾಗಿತ್ತು.

ಅದೊಂದು ಘಟನೆಯಿಂದ ತುಂಡುಡುಗೆ ಧರಿಸದಿರುವ ನಿರ್ಧಾರಕ್ಕೆ ಬಂದ ಸಾಯಿ ಪಲ್ಲವಿ 

ಈಗಿನ ಚಿತ್ರರಂಗದಲ್ಲಿ ನಾಯಕಿಯಾಗಿ ಒಂದೆರಡು ಚಿತ್ರ ನಟಿಸಿದ ನಂತರ ಅವಕಾಶವಿಲ್ಲದೆ ಐಟಂ ಸಾಂಗಿಗೆ ಅಭಿನಯಿಸುವ ನಾಯಕಿಯರು ಹೆಚ್ಚಾಗಿದ್ದಾರೆ. ಆದರೆ ಸಾಯಿ ಪಲ್ಲವಿಯವರು ಅವಕಾಶವಿಲ್ಲದಿದ್ದರೂ ಪರವಾಗಿಲ್ಲ ತುಂಡುಡುಗೆ ಧರಿಸಿ ಅಸಭ್ಯವಾಗಿ ಐಟಂ ಸಾಂಗ್ ನಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದರು. ಅವರ ಈ ಹೇಳಿಕೆಗೆ ಬಲವಾದ ಕಾರಣವಿದೆ ಅದೇನೆಂದರೆ, ಪ್ರೆಮಾಂ ಚಿತ್ರದ ಯಶಸ್ವಿ ಪ್ರದರ್ಶನದ ನಂತರ ಅವರು ಸೀರೆಯಲ್ಲಿ ಅಭಿಮಾನಿಗಳಿಗೆ ಇಷ್ಟವಾಗಿದ್ದರು ಆದರೆ ಅವರ ವೈದ್ಯಕೀಯ ಶಿಕ್ಷಣದ ಸಮಯದಲ್ಲಿ ದೂರದ ಜಾರ್ಜಿಯ ದೇಶದಲ್ಲಿ ಟ್ಯಾಂಗೋ ಡ್ಯಾನ್ಸಿಗೆ ತುಂಡುಡುಗೆ ಲ್ಲಿ ನೃತ್ಯ ಮಾಡಿದ್ದ ವಿಡಿಯೋ premam ಸಿನಿಮಾದ ನಂತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸೀರೆಯಲ್ಲಿ ಇಷ್ಟಪಟ್ಟಿದ ಅಭಿಮಾನಿಗಳಿಗೆ ಇದು ತುಂಬಾ ಬೇಜಾರಾಗಿ ವಿವಿಧ ರೀತಿಯ ಕಾಮೆಂಟ್ಗಳು ಹರಿದು ಬಂದಿತ್ತು. ಈ ಘಟನೆ ನಂತರ ಅವರು ಯಾವುದೇ ಕಾರ್ಯಕ್ರಮಕ್ಕೆ ಹೋದರು ಚೂಡಿ ಮತ್ತು ಸೀರೆಯಲ್ಲಿ ಹೋಗುತ್ತಿದ್ದರು.

Leave a Comment