Wipro company ಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.

Bengaluru : Wipro company ಅರ್ಹ ಅಭ್ಯರ್ಥಿಗಳಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಕರೆದಿದೆ. ಅಭ್ಯರ್ಥಿಗಳು ಕಂಪನಿಯ ಅಧಿಕೃತ ವೆಬ್ಸೈಟ್ನಲ್ಲಿ ಲಾಗಿನ್ ಆಗಿ ಅರ್ಜಿ ಸಲ್ಲಿಸಬಹುದು. Offline ಮೋಡ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಅರ್ಜಿಯನ್ನು ಕರೆಯಲಾಗಿರುವ ಹುದ್ದೆಗಳ ವಿವರಗಳನ್ನು ಈ ಕೆಳಗೆ ನೀಡಲಾಗಿದೆ. ಕರೆಯಲಾದ ಹುದ್ದೆಗಳಿಗೆ ನೀವು ಅರ್ಹರಾಗಿದ್ದರೆ ಅರ್ಜಿ ಸಲ್ಲಿಸಬಹುದಾಗಿದೆ ಮತ್ತು ಹುದ್ದೆಗಳ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

Wipro

 

About wipro company.

Wipro ಕಂಪನಿ ಲಿಮಿಟೆಡ್ ಒಂದು ಮಲ್ಟಿ ನ್ಯಾಷನಲ್ ಕಂಪನಿಯಾಗಿದ್ದು ಇದು ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಸೇವೆಯನ್ನು ನೀಡುತ್ತಿದೆ ಮತ್ತು ಭಾರತದ ಅತಿ ಮುಖ್ಯವಾದ ಐಟಿ ಕಂಪನಿಗಳಲ್ಲಿ ಒಂದಾಗಿದೆ.

ಹುದ್ದೆಗಳ ವಿವರ

ಹುದ್ದೆಯ ಅನುಸಾರವಾಗಿ 32,000 ದಿಂದ 51,000/month ವೇತನ ನೀಡಲಾಗುತ್ತದೆ ಮತ್ತು ಭಾರತದ ವಿವಿಧ ಪ್ರದೇಶಗಳಲ್ಲಿ ಉದ್ಯೋಗ ಮಾಡಬಹುದಾಗಿದೆ. ಫುಲ್ ಟೈಮ್ ಹುದ್ದೆಯಾಗಿದ್ದು ವರ್ಕ್ ಫ್ರಂ ಹೋಂ ಅವಕಾಶವಿದೆ. ಅನುಭವ ಇರುವ ಮತ್ತು ಫ್ರೆಶರ್ಸ್ ಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ ಮತ್ತು ಅರ್ಜಿ ಸಲ್ಲಿಸಲು ಯಾವುದೇ ಫೀಸ್ ನೀಡಬೇಕಾಗಿಲ್ಲ.

ಅಭ್ಯರ್ಥಿಗಳು ಹೇಗೆ ಅರ್ಜಿ ಸಲ್ಲಿಸಬೇಕು

ಅಭ್ಯರ್ಥಿಗಳು wipro ಸಂಸ್ಥೆಯ ಅಧಿಕೃತ ಜಾಲತಾಣಕ್ಕೆ ಹೋಗಿ ಲಾಗಿನ್ ಮಾಡಿ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು. ಅರ್ಜಿ ಸಲ್ಲಿಕೆ ಯಶಸ್ವಿಯಾದ ನಂತರ ಅರ್ಜಿ ಸಲ್ಲಿಸಿದ ಪ್ರಿಂಟನ್ನು ಅಭ್ಯರ್ಥಿ ತೆಗೆದಿಟ್ಟುಕೊಳ್ಳುವುದು ಉತ್ತಮವಾಗಿದೆ.

ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಅನ್ನು ಒತ್ತಿ

https://careers.wipro.com/careers-home

ಸ್ಟಾಪ್ ಸೆಲೆಕ್ಷನ್ ಕಮಿಷನ್ ಕಡೆಯಿಂದ ಹುದ್ದೆಗೆ ಅರ್ಜಿ ಆಹ್ವಾನ 

ಹುದ್ದೆಯ ಹೆಸರು : combined higher secondary level

ಪ್ರಮುಖ ದಿನಾಂಕಗಳು 

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ 9/5/2023

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 8/6/23

ಆನ್ಲೈನ್ ಶುಲ್ಕ ಕಟ್ಟಲು ಕೊನೆಯ ದಿನಾಂಕ 10/6/2023

ಆಫ್ಲೈನ್ ಚಲನ್ ಪಡೆದುಕೊಳ್ಳಲು ಕೊನೆಯ ದಿನಾಂಕ 11/6/23

ಚಲನ್ ಕಟ್ಟಲು ಕೊನೆಯ ದಿನಾಂಕ 12/6/23

ಅರ್ಜಿಯ ತಿದ್ದುಪಡಿ ಮಾಡಲು ಮತ್ತು ತಿದ್ದುಪಡಿ ಮಾಡಲು ಶುಲ್ಕ ಪಾವತಿ ಕೊನೆಯ ದಿನಾಂಕ 14/5/23

ಮೊದಲ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ ಆಗಸ್ಟ್ 2023

ಎರಡನೇ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ ದಿನಾಂಕ: ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು.

ವೇತನ ಶ್ರೇಣಿ 

ಲೋವರ್ ಡಿವಿಷನ್ ಕ್ಲರ್ಕ್ ಅಥವಾ ಜೂನಿಯರ್ ಸೆಕ್ರೆಟರಿಯೆಟ್ ಅಸಿಸ್ಟೆಂಟ್ (jsa) ಹುದ್ದೆಯ ವೇತನ ಶ್ರೇಣಿ 19900ರಿಂದ 63200. ಡಾಟಾ ಎಂಟ್ರಿ ಆಪರೇಟರ್ ಹುದ್ದೆಯ ವೇತನ ಶ್ರೇಣಿ 25000 ರಿಂದ 81,100. ಟಾಟಾ ಎಂಟ್ರಿ ಆಪರೇಟರ್ ಗ್ರೇಡ್ ಎ ಹುದ್ದೆಯ ವೇತನ ಶ್ರೇಣಿ 25000 ರಿಂದ 81,100.

ಹುದ್ದೆಗಳು 

ಸ್ಟಾಫ್ ಸೆಲೆಕ್ಷನ್ ಕಮಿಷನ್ ಆಫ್ ಇಂಡಿಯಾ ವತಿಯಿಂದ ಭಾರತದಾದ್ಯಂತ ಅಂದಾಜು 600 ಹುದ್ದೆಗಳು ಮತ್ತು ಮುಂದಿನ ದಿನಗಳಲ್ಲಿ ಹುದ್ದೆಯ ಅಂತರ ಹೆಚ್ಚಾಗುವ ಸಂಭವವಿದೆ.

ವಯಸ್ಸಿನ ಮಿತಿ

1/08/23 ಕ್ಕೆ ಸರಿಯಾಗಿ ಅಭ್ಯರ್ಥಿಯು 18ರಿಂದ 27 ವರ್ಷದ ಒಳಗಿರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವರ್ಗದವರಿಗೆ ಐದು ವರ್ಷದ ವಯಸ್ಸಿನ ವಿನಾಯಿತಿ, ಓಬಿಸಿ ವರ್ಗದವರಿಗೆ ಮೂರು ವರ್ಷಗಳ ವಯಸ್ಸಿನ ವಿನಾಯಿತಿ ನೀಡಲಾಗಿದೆ.

Pwbd ಸಾಮಾನ್ಯ ವರ್ಗದವರಿಗೆ 10 ವರ್ಷ, pwbd ಓಬಿಸಿ ವರ್ಗದವರಿಗೆ 13 ವರ್ಷ, pwbd ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದುರ್ಗದವರಿಗೆ 15 ವರ್ಷ, ನಿವೃತ್ತ ಸೈನ್ಯಾಧಿಕಾರಿಗೆ 3 ವರ್ಷ ತಮ್ಮ ಸರ್ವಿಸ್ ಮುಗಿದ ದಿನದಿಂದ, ವಿಧವೆ ಮಹಿಳೆ ಅಥವಾ ವಿಚ್ಛೇದೀತ ಮಹಿಳೆ 2ನೇ ಮದುವೆ ಆಗದಿದ್ದಲ್ಲಿ 35 ವರ್ಷ, ವಿಧವಾ ಮಹಿಳೆ ಅಥವಾ ವಿಚ್ಛೇದಿತ ಮಹಿಳೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವರ್ಗಕ್ಕೆ ಸೇರಿದ್ದಲ್ಲಿ ಮತ್ತು ಎರಡನೇ ಮದುವೆ ಆಗದಿದ್ದಲ್ಲಿ 40 ವರ್ಷದ ವಯಸ್ಸಿನ ಮಿತಿಯನ್ನು ನೀಡಲಾಗಿದೆ.

ಕೇರಳ ಮತ್ತುಕರ್ನಾಟಕದಲ್ಲಿರುವ ಪರೀಕ್ಷಾ ಕೇಂದ್ರಗಳು

ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ, ಕಲಬುರ್ಗಿ (ಗುಲ್ಬರ್ಗ), ಮಂಗಳೂರು, ಉಡುಪಿ, ಮೈಸೂರು, ಶಿವಮೊಗ್ಗ, ಎರ್ನಾಕುಲಂ, ಕೊಲ್ಲಂ, ಕೊಟ್ಟಾಯಂ, ತ್ರಿಶೂರ್, ತಿರುವನಂತಪುರಂ, ಕವರಟ್ಟಿ.

ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿರುವ ಪರೀಕ್ಷಾ ಕೇಂದ್ರಗಳು

Bhagalpur, muzaffarpur,patna,purnea,agra, Bareilly, Gorakhpur, Jhansi, Kanpur, Lucknow, Meerut, prayagraj, Varanasi

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಸಿಕ್ಕಿಂ, ಜಾರ್ಖಂಡ್ ಮತ್ತು ಒಡಿಸ್ಸಾ ರಾಜ್ಯಗಳಲ್ಲಿರುವ ಪರೀಕ್ಷಾ ಕೇಂದ್ರಗಳು

Port Blair, bhanbad, Jamshedpur, Ranchi, Balasore, brahmapur, Bhubaneswar, Cuttack,Rourkela, sambalpur, gangtok,Asansol,Burdwan,Burgapur,kalyani,kolkata,Silguri.

ಸರಕಾರಿ ಹುದ್ದೆಗಳು ಕನ್ನಡಿಗರಿಗೆ ಮರೀಚಿಕೆಯಾಗುತ್ತಿರುವುದೇಕೆ.

ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಆದರೆ ಕೇಂದ್ರ ಸರಕಾರದ ಹುದ್ದೆಗಳಲ್ಲಿ ಕನ್ನಡಿಗರು ಆಯ್ಕೆಯಾಗುವುದು ಅತಿ ವಿರಳವಾಗಿದೆ. ಇದಕ್ಕೆ ಮುಖ್ಯ ಕಾರಣಗಳು ಹಲವಾರು ಇದೆ. ಉತ್ತರ ಮತ್ತು ದಕ್ಷಿಣದಲ್ಲಿ ಹಿಂದಿ ಭಾಷಿಕರೇ ಹೆಚ್ಚು ಸರಕಾರಿ  ಹುದ್ದೆಯನ್ನು ಅಲಂಕರಿಸಿರುವುದು ನಾವು ಹೆಚ್ಚಾಗಿ ನೋಡುತ್ತಿದ್ದೇವೆ.

ನಮ್ಮಲ್ಲಿ ಸರಕಾರಿ ಉದ್ಯೋಗಗಳ ಮಾಹಿತಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಇರುವ ಮೂಲಸೌಕರ್ಯಗಳು ಉತ್ತರ ಭಾರತಕ್ಕೆ ಹೋಲಿಸಿದರೆ ತುಂಬಾ ಕಳಪೆಯಾಗಿದೆ. ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಕೇಂದ್ರೀಯ ಹುದ್ದೆಗಳ ಪರೀಕ್ಷೆಯನ್ನು ನಡೆಸುವುದು ಹಿಂದಿ ಭಾಷೆಯ ಜನರಿಗೆ ತುಂಬಾ ಅನುಕೂಲಕರವಾಗಿದೆ. ಕನ್ನಡಿಗರು ಎಷ್ಟೇ ಹೋರಾಟ ಮಾಡಿದರು ಕನ್ನಡ ಭಾಷೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ವೇದಿಕೆ ಮಾಡಿಕೊಡದಿರುವುದು ಕನ್ನಡಿಗರಿಗೆ ಅತಿ ದೊಡ್ಡ ಹಿನ್ನಡೆಯಾಗಿದೆ.

ಕೇಂದ್ರ ಸರ್ಕಾರದ ಅಧೀನದಲ್ಲಿರುವ ರೈಲ್ವೆ ಇಲಾಖೆ, ಪೋಲಿಸ್ ಇಲಾಖೆ, ಏರ್ಪೋರ್ಟ್, ಎಂ ಅರ ಪಿ ಎಲ್, ಬಂದರು, ಬ್ಯಾಂಕುಗಳು ಹೀಗೆ ಪಟ್ಟಿ ಮಾಡಿದರೆ ಅನೇಕ ಕಡೆಗಳಲ್ಲಿ ಉತ್ತರ ಭಾರತದ ಜನರು ಹೆಚ್ಚಾಗಿ ಕಾಣುತ್ತಾರೆ.

ಸರಕಾರಿ ಹುದ್ದೆ ಪಡೆಯಬೇಕಾದರೆ ಅತಿ ಹೆಚ್ಚು ಓದು ಮತ್ತು ತಾಳ್ಮೆ ಇರಬೇಕಾದ ಅನಿವಾರ್ಯತೆ ಇದೆ ಯಾಕೆಂದರೆ 10,000 ಹುದ್ದೆಗಳನ್ನು ಕೇಂದ್ರ ಸರಕಾರ ಕರೆದರೆ 10 ಕೋಟಿ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಾರೆ. ಹಾಗಾಗಿ ಹೆಚ್ಚು ಓದು ಮತ್ತು ಹೆಚ್ಚು ಅಂಕಗಳು ಅಭ್ಯರ್ಥಿಯ ಆಯ್ಕೆಗೆ ಕಾರಣವಾಗುತ್ತದೆ. ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಬಾಲ್ಯದಿಂದ ಸರಕಾರಿ ಹುದ್ದೆ ಪಡೆಯಲು ಸಲಹೆ ಮತ್ತು ಮಾರ್ಗದರ್ಶನದ ಕೊರತೆ ಹೆಚ್ಚಾಗಿ ಕಂಡುಬರುತ್ತದೆ.

ಸರಕಾರಿ ಕೆಲಸ ಪಡೆಯಲು ವರ್ಷಗಟ್ಟಲೆ ಅಧ್ಯಯನ ಮಾಡಿ ಕೆಲಸ ಸಿಗದೇ ನಿರಾಸೆಯಾಗಿ ಖಿನ್ನತೆಗೆ ಒಳಗಾಗುವವರ ಸಂಖ್ಯೆ ಹೆಚ್ಚಾಗಿವೆ ಎಂದು ಇತ್ತೀಚಿಗಿನ ವರದಿಯೊಂದು ಹೇಳಿಕೊಂಡಿದೆ. ಹಾಗಾಗಿ ಓದಿನ ಜೊತೆಗೆ ಪೋಷಕರ ಆತ್ಮಸ್ಥೈರ್ಯ ಮತ್ತು ಬೆಂಬಲ ಪರೀಕ್ಷಾರ್ಥಿಗೆ ಸಿಗಬೇಕು. ಒಂದು ಬಾರಿ ಪರೀಕ್ಷೆ ಬರೆದು ಕೆಲಸ ಸಿಗಲಿಲ್ಲವೆಂದು ಬೇಸರ ಪಡದೆ ಸಾಲು ಸಾಲು ಪರೀಕ್ಷೆಯನ್ನು ಬರೆಯಬೇಕು ಹಾಗಾದರೆ ಅಭ್ಯರ್ಥಿಗೆ ಪರೀಕ್ಷೆ ಬರೆಯಲು ಬೇಕಾದ ಕೌಶಲ್ಯವನ್ನು ರೂಪಿಸಿಕೊಳ್ಳಬಹುದು.

ಸ್ಟಾಪ್ ಸೆಲೆಕ್ಷನ್ ಕಮಿಷನ್ ಆಫ್ ಇಂಡಿಯಾ ಕೇಂದ್ರ ಸರ್ಕಾರದ ವಿವಿಧ ಕಚೇರಿಗಳಿಗೆ ಸಿಬ್ಬಂದಿಯನ್ನು ಆಯ್ಕೆ ಮಾಡಿ ಕಳುಹಿಸುತ್ತದೆ. ಪ್ರತಿ ವರ್ಷ ಸಾವಿರಾರು ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ನೇಮಕಗೊಳಿಸುವುದು ಸ್ಟಾಪ್ ಸೆಲೆಕ್ಷನ್ ಕಮಿಷನ್ ಆಫ್ ಇಂಡಿಯಾದ ಕೆಲಸವಾಗಿದೆ.

Leave a Comment