ಪಿಯುಸಿ (after puc) ನಂತರ ಮುಂದೇನು.

ಪಿಯುಸಿ: ಪಿಯುಸಿ (after puc) ನಂತರ ನಾವು ತೆಗೆದುಕೊಳ್ಳುವ ಕೆಲವೊಂದು ನಿರ್ಧಾರಗಳು ನಮ್ಮ ಮುಂದಿನ ಜೀವನಕ್ಕೆ ದಾರಿದೀಪವಾಗಲಿದೆ. ಪಿಯುಸಿ ಮುಗಿದ ವಿದ್ಯಾರ್ಥಿಗಳಿಗೆ ತಮ್ಮ ಪೋಷಕರ ಮತ್ತು ಶಿಕ್ಷಕ ಮಾರ್ಗದರ್ಶನ ಅತಿ ಮುಖ್ಯವಾಗಿದೆ. ತಮ್ಮ ತಪ್ಪು ನಿರ್ಧಾರದಿಂದ ಕಳಪೆ ಮಟ್ಟದ ಶಿಕ್ಷಣ ನೀಡುವ ಕಾಲೇಜು ಮತ್ತು ಮಹತ್ವವಿಲ್ಲದ ಕೋರ್ಸ್ ಗಳಿಗೆ ಸೇರಿದರೆ ನಮ್ಮ ಭವಿಷ್ಯಕ್ಕೆ ನಮ್ಮ ತಪ್ಪು ನಿರ್ಧಾರವೇ ಮುಳ್ಳಾಗಬಹುದು ಮತ್ತು ಭವಿಷ್ಯದಲ್ಲಿ ಚಿಂತೆಗೆ ಜಾರಬಹುದು ಹಾಗಾಗಿ ನಾವಿಲ್ಲಿ ಪಿಯುಸಿ ನಂತರ ತೆಗೆದುಕೊಳ್ಳಬಹುದಾದ ಕೋರ್ಸ್ಗಳ ವಿವರವನ್ನು ನೀಡಿದ್ದೇವೆ.

ಪಿಯುಸಿ (After puc) ನಂತರ ಮಾಡಬಹುದಾದ ಕೋರ್ಸ್ ಗಳಿವು.

MBBS : ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಬಯೋಲಜಿ ವಿಷಯವನ್ನು ತೆಗೆದುಕೊಂಡ ವಿದ್ಯಾರ್ಥಿಗಳು ಐದು ವರ್ಷದ ಎಂಬಿಬಿಎಸ್ ಪದವಿಯನ್ನು ಮಾಡಬಹುದು. ನ್ಯಾಷನಲ್ ಎಂಟ್ರೆನ್ಸ್ ಟೆಸ್ಟ್ನಲ್ಲಿ ಪಾಸಾದರೆ ಉತ್ತಮ ಕಾಲೇಜು ಮತ್ತು ಸರ್ಕಾರಿ ಕೋಟದಲ್ಲಿ ಸೀಟು ಪಡೆದರೆ ತಮ್ಮ ಭವಿಷ್ಯವನ್ನು ಭದ್ರ ಪಡಿಸಬಹುದು.

ಜಗತ್ತು ಬೆಳೆದಂತೆ ಮನುಷ್ಯರ ಸ್ವಾರ್ಥ ಮತ್ತು ಕೆಟ್ಟ ಆಲೋಚನೆಗಳಿಂದ ಒತ್ತಡಕೊಳ್ಳಲಾಗಿ ತಮ್ಮ ಆರೋಗ್ಯ ಮೂವತ್ತನೇ ವಯಸ್ಸಿನಿಂದಲೇ ಹದಗೆಟ್ಟುವುದು ಈಗ ಸಾಮಾನ್ಯವಾಗಿ. ಹಾಗಾಗಿ ಡಾಕ್ಟರ್ ಗಳ ಕೊರತೆ ನಮ್ಮ ದೇಶದಲ್ಲಿ ಹೆಚ್ಚಾಗಿದೆ. ದುಬಾರಿ ಶಿಕ್ಷಣ ಶುಲ್ಕ ಮತ್ತು ಕಡಿಮೆ ಸರಕಾರಿ ಮೆಡಿಕಲ್ ಕಾಲಜುಗಳಿಂದಾಗಿ mbbs ಮಾಡುವವರ ಸಂಖ್ಯೆ ಕಡಿಮೆ ಇದೆ. ಹಾಗಾಗಿ ಈ ಕೋರ್ಸ್ ಮಾಡಿದವರಿಗೆ ಹೆಚ್ಚು ಬೇಡಿಕೆ ಇದೆ.

ಬ್ಯಾಚುಲರ್ ಆಫ್ ಇಂಜಿನಿಯರಿಂಗ್ :ಪಿಯುಸಿ ನಂತರ ಹಲವು ವಿಭಾಗಗಳಲ್ಲಿ ಇಂಜಿನಿಯರಿಂಗ್ ಮಾಡಬಹುದಾಗಿದೆ. ಪಿಯುಸಿಯಲ್ಲಿ ವಿಜ್ಞಾನ ವಿಭಾಗ ತೆಗೆದುಕೊಂಡರೆ ಸಿಇಟಿ ಪರೀಕ್ಷೆ ಪಾಸ್ ಮಾಡಿ ಉತ್ತಮ ಕಾಲೇಜು ಮತ್ತು ಸರ್ಕಾರಿ ಕೋಟ ಅಡಿಯಲ್ಲಿ ಸೀಟು ಪಡೆದರೆ ನಾಲ್ಕು ವರ್ಷದ BE ಕೋರ್ಸ್ ಅನ್ನು ಆರಾಮಾಗಿ ಮಾಡಬಹುದು.

ಬ್ಯಾಚುಲರ್ ಆಫ್ ಇಂಜಿನಿಯರಿಂಗ್ ನಲ್ಲಿ ಕಂಪ್ಯೂಟರ್ ಸೈನ್ಸ್, ಮೆಕ್ಯಾನಿಕಲ್, ಸಿವಿಲ್, ಎಲೆಕ್ಟ್ರಿಕಲ್, ಎಲೆಕ್ಟ್ರಿಕಲ್ ಅಂಡ್ ಕಮ್ಯುನಿಕೇಷನ್ ವಿಭಾಗದಲ್ಲಿ ಎಂಜಿನಿಯರಿಂಗ್ ಮಾಡಬಹುದಾಗಿದೆ. ಕಂಪ್ಯೂಟರ್ ಸೈನ್ಸ್ ಮಾಡಿದರೆ ಐಟಿ ಕಂಪನಿಗಳಲ್ಲಿ ಉತ್ತಮ ಪ್ಯಾಕೇಜ್ ಗಳ ಕೆಲಸವನ್ನು ತಮ್ಮ ಕೌಶಲ್ಯದಿಂದ ಪಡೆಯಬಹುದಾಗಿದೆ.

ದಿನೇ ದಿನೇ ಪ್ರಪಂಚ ಬೆಳೆದಂತೆ ತಂತ್ರಜ್ಞಾನ ಹೆಚ್ಚುತ್ತಿರುವುದರಿಂದ ವೃತ್ತಿಪರ ಕೋರ್ಸ್ ಗಳಿಗೆ ಹೆಚ್ಚು ಬೇಡಿಕೆ ಇದೆ ಮತ್ತು ಇಂಜಿನಿಯರಿಂಗ್ ಮಾಡಿದ ವಿದ್ಯಾರ್ಥಿಗಳಿಗೆ ಕೆಲಸದ ಕೊರತೆಗೇನು ಕಡಿಮೆ ಇಲ್ಲ.

ಬ್ಯಾಚುಲರ್ ಆಫ್ ಡಿಗ್ರಿ : ತಮಗೆ ವೃತ್ತಿಪರ ಕೋರ್ಸ್ಗಳು ಬೇಡವೆಂದರೆ ವಿದ್ಯಾರ್ಥಿಗಳು ಪಿಯುಸಿ ನಂತರ ಡಿಗ್ರಿ ಕೋರ್ಸಗಳನ್ನು ಮಾಡಬಹುದು. ವಿಜ್ಞಾನ ವಿಭಾಗದಲ್ಲಿ ಪಿಯುಸಿ ಮಾಡಿದರೆ ಬ್ಯಾಚುಲರ್ ಆಫ್ ಸೈನ್ಸ್ (ಬಿಎಸ್ಸಿ,), ವಾಣಿಜ್ಯ ವಿಭಾಗದಲ್ಲಿ ಪಿಯುಸಿ ಮಾಡಿದರೆ bcom, BBA ಕೋರ್ಸುಗಳನ್ನು ಮಾಡಬಹುದು.

ಕಲಾ ವಿಭಾಗದಲ್ಲಿ ಪಿಯುಸಿ ಮಾಡಿದವರು ಬ್ಯಾಚುಲರ್ ಆಫ್ ಆರ್ಟ್ಸ್ ವಿಭಾಗದಲ್ಲಿ (BA)ಪದವಿ ಮಾಡಬಹುದು. ಪಿಯುಸಿ ನಂತರ ಬ್ಯಾಚುಲರ್ ಆಫ್ ಸೋಶಿಯಲ್ ವರ್ಕ್ ವಿಭಾಗದಲ್ಲೂ ಪದವಿಯನ್ನು ಮಾಡಿ ಉದ್ಯೋಗ ಪಡೆಯಬಹುದು. ಡಿಗ್ರಿ ಮಾಡಿದ ನಂತರ ಸ್ನಾತಕೋತರ ಪದವಿಯನ್ನು ಮಾಡಬಹುದು ಮತ್ತು ಬಿ ಎಡ್ ಮಾಡಿ ಉಪನ್ಯಾಸಕರಾಗಿ ಸೇವೆ ಮಾಡಬಹುದು.

ಪದವಿ ನಂತರ ವಾಣಿಜ್ಯ ವಿಭಾಗದವರು ಸಿಎ ಪರೀಕ್ಷೆ ಪಾಸ್ ಮಾಡಿ ಉತ್ತಮ ಜೀವನವನ್ನು ರೂಪಿಸಬಹುದು. ಕೇಂದ್ರ ಸರ್ಕಾರ ಜಿಎಸ್‌ಟಿ ಅನ್ನು ಜಾರಿಗೊಳಿಸಿದ ನಂತರ ಚಾರ್ಟೆಡ್ ಅಕೌಂಟೆಂಟ್ ಗಳಿಗೆ ಬೇಡಿಕೆ ಹೆಚ್ಚಾಗಿದೆ. ನಮ್ಮಲ್ಲಿ ಚಾರ್ಟೆಡ್ ಅಕೌಂಟೆಂಟ್ ಪರೀಕ್ಷೆ ಪಾಸ್ ಮಾಡಿದವರ ಸಂಖ್ಯೆ ಕಡಿಮೆ ಇರುವ ಕಾರಣ ಚಾರ್ಟೆಡ್ ಅಕೌಂಟೆಂಟ್ ನೂರಾರು ಕಂಪನಿಗಳನ್ನು ಮ್ಯಾನೇಜ್ ಮಾಡುತ್ತಾನೆ ಹಾಗಾಗಿ ಬಿ ಕಾಂ ಮಾಡಿ ಸಿಎ ಪರೀಕ್ಷೆ ಪಾಸ್ ಮಾಡಬಹುದು.

BA LLB : ಪಿಯುಸಿ ಆದ ನಂತರ ನ್ಯಾಯಶಾಸ್ತ್ರದಲ್ಲಿ ಪದವಿಯನ್ನು ಮಾಡಬಹುದು. ಈಗಿನ ಕಾಲದಲ್ಲಿ ನ್ಯಾಯವಾದಿಗಳಿಗೆ ಬೇಡಿಕೆ ಹೆಚ್ಚಾಗಿದೆ ಹಾಗಾಗಿ BA LLB ಮಾಡಿದರೆ ಉತ್ತಮ ಆದಾಯ ಗಳಿಸಬಹುದು. ಬಿ ಎ ಎಲ್ ಎಲ್ ಬಿ 5 ವರ್ಷಗಳ ಭಾರತದ ಕಾಲೇಜುಗಳಲ್ಲಿ ವ್ಯಾಸಂಗ ಮಾಡಲು ಇಚ್ಚಿಸಿದ್ದಲ್ಲಿ ಪ್ರವೇಶ ಪರೀಕ್ಷೆಯನ್ನು ಪಾಸ್ ಮಾಡಬೇಕು.

ಪದವಿ ನಂತರ ಮೂರು ವರ್ಷಗಳ ಎಲ್‌ಎಲ್‌ಬಿ ಮಾಡುವ ಬದಲು ಪಿಯುಸಿ ನಂತರ ಬಿ ಎ ಎಲ್ ಎಲ್ ಬಿ ಮಾಡುವುದು ಉತ್ತಮವಾಗಿದೆ. ಅಪರಾಧ ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ನ್ಯಾಯಾಧೀಶರಿಗೆ ಮತ್ತು ನ್ಯಾಯವಾದಿಗಳಿಗೆ ಬೇಡಿಕೆ ಹೆಚ್ಚಾಗಿದೆ.

ಬಿಎಸ್ಸಿ ಹೋಟೆಲ್ ಮ್ಯಾನೇಜ್ಮೆಂಟ್ : ಫೈವ್ ಸ್ಟಾರ್, ಸೆವೆನ್ ಸ್ಟಾರ್, ತ್ರೀ ಸ್ಟಾರ್ ಹೋಟೆಲ್ ಗಳಲ್ಲಿ ಅಡುಗೆ ಮಾಡುವವರಿಗೆ ಬೇಡಿಕೆ ಹೆಚ್ಚಿದೆ. ಮೂರು ವರ್ಷಗಳ ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್ ಮಾಡುವುದರಿಂದ ಉತ್ತಮವಾದ ಜೀವನವನ್ನು ಕಟ್ಟಿಕೊಳ್ಳಬಹುದು. ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇರೋ ಕಾರಣದಿಂದ ಈ ಕೋರ್ಸಿಗೆ ಬೇಡಿಕೆ ಹೆಚ್ಚಾಗಿದೆ.

ಬಿಎಸ್ಸಿ ನರ್ಸಿಂಗ್ : ಪಿಯುಸಿ ನಂತರ ವಿಜ್ಞಾನ ವಿಭಾಗದಲ್ಲಿ ಪಾಸಾದವರು ಬಿ ಎಸ್ ಸಿ ನರ್ಸಿಂಗ್ ಮಾಡಬಹುದು. ಪ್ರಪಂಚದಾದ್ಯಂತ ಈ ಕೋರ್ಸ್ ಮಾಡಿದವರಿಗೆ ಉತ್ತಮ ಬೇಡಿಕೆ ಇದೆ ಮತ್ತು ಉತ್ತಮ ವೇತನದ ಅವಕಾಶವಿದೆ. ಕರ್ನಾಟಕದಲ್ಲಿ ಈ ಕೋರ್ಸ್ ಮಾಡಲು ಅನೇಕ ಪ್ರೈವೇಟ್ ಕಾಲೇಜುಗಳು ಮತ್ತು ಸರಕಾರಿ ಕಾಲೇಜುಗಳಿವೆ.

ಸರಕಾರಿ ಕಾಲೇಜುಗಳಲ್ಲಿ ಸೀಟ್ ಪಡೆಯಲು ಮೆರಿಟ್ ನಲ್ಲಿ ಉತ್ತಮ ಅಂಕ ಗಳಿಸಬೇಕು. ನರ್ಸಿಂಗ್ ಕೋರ್ಸ್ ಗಳನ್ನು ಹೆಚ್ಚಾಗಿ ಮಹಿಳೆಯರೇ ಮಾಡುವುದರಿಂದ ನರ್ಸಿಂಗ್ ವಿಭಾಗದಲ್ಲಿ ಪುರುಷರ ಸಂಖ್ಯೆ ಕಡಿಮೆ ಇದೆ ಹಾಗಾಗಿ ಪಿಯುಸಿ ನಂತರ ಹುಡುಗರು ಬಿ ಎಸ್ ಸಿ ನರ್ಸಿಂಗ್ ಮಾಡಿದರೆ ವಿದೇಶಗಳಲ್ಲಿ ಉತ್ತಮ ವೇತನದೊಂದಿಗೆ ಜೀವನ ಕಟ್ಟಿಕೊಳ್ಳಬಹುದು.

ಐಎಎಸ್ ಮತ್ತು ಐಪಿಎಸ್ ಪಾಸ್ ಮಾಡಬೇಕಾದರೆ ಯಾವ ಕೋರ್ಸ್ ಮಾಡಬಹುದು.

ಪಿಯುಸಿ ನಂತರ ಯಾವುದೇ ರಾಜ್ಯದ ವಿಶ್ವವಿದ್ಯಾನಿಲಯದಿಂದ ಮಾನ್ಯತೆ ಹೊಂದಿದ ಪದವಿ ಮತ್ತು ವೃತ್ತಿಪರ ಕೋರ್ಸ್ ಗಲಾದ ಇಂಜಿನಿಯರಿಂಗ್, ಎಂಬಿಬಿಎಸ್ ಪದವಿಯನ್ನು ಹೊಂದಿದ ಅಭ್ಯರ್ಥಿಗಳು ಐಎಎಸ್, ಐಪಿಎಸ್ ಅಧಿಕಾರಿಗಳಾಗಬಹುದು. ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡುವುದು ಒಂದು ತಪಸ್ಸು ಇದ್ದಂತೆ. ಸಾವಿರಾರು ಅಭ್ಯರ್ಥಿಗಳು ತಮ್ಮ ಸಮಯವನ್ನು ಅನೇಕ ವರ್ಷ ಪರೀಕ್ಷೆ ಪಾಸ್ ಮಾಡಲು ಮೀಸಲಿಡುತ್ತಾರೆ.

ಐಎಎಸ್ ಮತ್ತು ಐಪಿಎಸ್ ಹುದ್ದೆಗಳು ಗೆಜೆಟೆಡ್ ಲೆವೆಲ್ ಹುದ್ದೆಗಳಾಗಿದ್ದು ಇವರ ಸಹಿಗಳಿಗೆ ಮುಖ್ಯವಾದ ಮಹತ್ವವಿರುತ್ತದೆ. ಯಾವುದೇ ದಾಖಲೆಗಳ ದೃಢೀಕರಣವನ್ನು ಇವರು ಮಾಡಬಹುದು.

ಕೆಎಎಸ್ ಪರೀಕ್ಷೆ ಪಾಸ್ ಮಾಡಲು ಯಾವ ಕೋರ್ಸ್ ಮಾಡಬಹುದು.

ಕೆ ಎಸ್ ಪರೀಕ್ಷೆ ಮಾಡಲು ಯಾವುದೇ ಅಧಿಕೃತ ವಿಶ್ವವಿದ್ಯಾನಿಲಯದಿಂದ ಪದವಿ ಅಥವಾ ವೃತ್ತಿಪರ ಕೋರ್ಸ್ ಗಳನ್ನು ಮಾಡಬಹುದು. ಕೆಎಸ್ ಹುದ್ದೆಗಳಿಗೆ ಹುದ್ದೆಗಳ ಸಂಖ್ಯೆಗಿಂತ 100 ಪಟ್ಟು ಹುದ್ದೆಯ ಆಕಾಂಕ್ಷಿಗಳು ಅರ್ಜಿ ಸಲ್ಲಿಸುತ್ತಾರೆ ಆದರೆ ಪರೀಕ್ಷೆಯಲ್ಲಿ ಪಾಸ್ ಆಗಿ ಅಧಿಕಾರಿಯಾಗಿ ಆಯ್ಕೆಯಾಗುವವರ ಸಂಖ್ಯೆ ತುಂಬಾ ಚಿಕ್ಕದಾಗಿದೆ.

ಕೆ ಎಸ್ ಪರೀಕ್ಷೆ ಪಾಸ್ ಮಾಡಲು ಅಭ್ಯರ್ಥಿಗಳು ತಮ್ಮ ಅಮೂಲ್ಯವಾದ ಸಮಯವನ್ನು ಬರಿ ಪರೀಕ್ಷೆಗೆ ಹೋದಳು ಮೀಸಲಿಡಬೇಕಾಗುತ್ತದೆ ಮತ್ತು ಕೆಲವೊಮ್ಮೆ ಐದಾರು ವರ್ಷ ಮೀಸಲಿಟ್ಟು ಕೆಲಸ ಸಿಗದಿದ್ದರೆ ಅವರು ತಮ್ಮ ಅಮೂಲ್ಯವಾದ ಸಮಯವನ್ನು ಕಳೆದುಕೊಂಡಂತಾಗುತ್ತದೆ.

Leave a Comment