ಸಪ್ತಸಾಗರದಲ್ಲಿ ಸದ್ದು ಮಾಡುತ್ತಿರುವ ಕನ್ನಡದ ಟ್ರಾವೆಲ್ youtubers ಗಳಿವರು..

YouTube: ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನ ಎಂಬುದು ಮಾನವನ ಜೀವನದ ಅತಿ ಮುಖ್ಯವಾದ ಭಾಗವಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಗಡಿ, ಭಾಷೆಗಳನ್ನು ಮೀರಿ ಇಂದು youtubers ಸಾಮಾಜಿಕ ಜಾಲತಾಣದಲ್ಲಿ ಪ್ರಮುಖವಾಗಿ ಬೆಳೆದು ನಿಂತಿದ್ದಾರೆ.

ಯೂಟ್ಯೂಬ್ ನಂಬಿ ಸಾವಿರಾರು ಜನ ನೂರಾರು ದೇಶ ಮತ್ತು ಭಾಷೆಗಳಲ್ಲಿ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಹಾಗೆ ನಮ್ಮ ಕನ್ನಡ ಭಾಷೆಯಲ್ಲಿ ಹಲವಾರು ಜನರು ಮನೋರಂಜನೆ, ಲೈಫ್ ಸ್ಟೈಲ್, ವಿಡಿಯೋಗ್ರಾಫಿ,motarvloging ಹೀಗೆ ಹಲವಾರು ವಿಷಯಗಳಲ್ಲಿ ವಿಡಿಯೋ ಮಾಡುತ್ತಿದ್ದಾರೆ. ಅಂತಹ ಸಾಲಿನಲ್ಲಿ ಪ್ರಮುಖ ಸಾಹಸೀ ಮತ್ತು ಹೆಚ್ಚು ಜನರಿಂದ ಗುರುತಿಸಲ್ಪಟ್ಟ ಕೆಲವು ಪ್ರಮುಖ ಟ್ರಾವೆಲ್ ಯೂಟ್ಯೂಬರ್ಗಳ ಬಗ್ಗೆ ಈ ಕೆಳಗೆ ವಿವರಿಸಿದ್ದೇವೆ.

ನಮಸ್ಕಾರ ದೇವರು ಹೇಗಿದ್ದೀರಾ: ಡಾಕ್ಟರ್ ಬ್ರೋ ಟ್ರಾವೆಲ್ youtubers

ತನ್ನ 20ನೇ ವಯಸ್ಸಿನಲ್ಲಿ ವಿಡಿಯೋ ಮಾಡಲು ಶುರು ಮಾಡಿದ ಇವರು ತನ್ನ ಯೂಟ್ಯೂಬ್ ಜರ್ನಿಯ ಶುರುವಿನಲ್ಲಿ ವಿಶ್ವ ಭೂಪಟದ ಮುಂದೆ ನಿಂತು ನಾನು ಪ್ರತಿಯೊಂದು ಜಾಗವನ್ನು ಬಿಡಲ್ಲ ಎಲ್ಲಾ ಜಾಗಕ್ಕೆ ಕಾಲಿಡುತ್ತೇನೆ ಮತ್ತು ಎಲ್ಲಾ ಕನ್ನಡಿಗರಿಗು ತೋರಿಸುತ್ತೇನೆ ಇದು ನನ್ನ ಪ್ರಾಮಿಸ್ ಎಂದು ಹೇಳಿದ್ದರು. ಈಗ ಡಾ. ಬ್ರೋ ಅವರು ತಾವು ಆಡಿದ ಮಾತನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಒಬ್ಬ ವ್ಯಕ್ತಿಯಲ್ಲಿ ಎಷ್ಟೇ ದುಡ್ಡು ಇದ್ದರೂ ಅವನಿಗೆ ಜಗತ್ತನಿ ಸುತ್ತಲೂ ಆಗುವುದಿಲ್ಲ ಆದರೆ ದುಡ್ಡಿಲ್ಲದಿದ್ದರೂ ಸಮಯ ಮತ್ತು ತಾಳ್ಮೆಯಿಂದ ಇಡೀ ಜಗತ್ತನ್ನೇ ತೋರಿಸುತ್ತಾ ಮುನ್ನುಗ್ಗುತ್ತ ಇದ್ದಾರೆ ಡಾ. ಬ್ರೋ ಅವರು.

ಅಂದ ಹಾಗೆ ಡಾ. ಬ್ರೋ ಅವರ ಪೂರ್ಣ ಹೆಸರು ಗಗನ್ ಶ್ರೀನಿವಾಸ್. ಇವರ ತಂದೆ ದೇವಸ್ಥಾನದಲ್ಲಿ ಅರ್ಚಕ ವೃತ್ತಿಯನ್ನು ಮಾಡುತ್ತಾರೆ ಮತ್ತು ಡಾ. ಬ್ರೋ ಅವರು ಕೂಡ ರಜಾ ದಿನದಲ್ಲಿ ತಾವು ಕೂಡ ಪೂಜೆ ಪುರಸ್ಕಾರ ಮಾಡುತ್ತಿದ್ದರು. ಡಾಕ್ಟರ್ ಬ್ರೋ ಅವರು ಬೆಂಗಳೂರಿನಲ್ಲಿ ಜನಿಸಿದ್ದರು ಮತ್ತು ತಮ್ಮ ವಿದ್ಯಾಭ್ಯಾಸವನ್ನು ಕೂಡ ಅಲ್ಲೇ ಮಾಡಿದ್ದಾರೆ.

ಡಾ. ಬ್ರೋ ಅವರು ಕನ್ನಡದಲ್ಲಿ ಕ್ರಾಂತಿ ಮಾಡಲು ಮುಖ್ಯ ಕಾರಣ ಅವರ ಶುದ್ಧ ಮತ್ತು ಮುಗ್ಧ ಕನ್ನಡ. ಗಗನ್ ಅವರು ತಮ್ಮ ಯೂಟ್ಯೂಬ್ ಜರ್ನಿಯ ಪ್ರಾರಂಭದಲ್ಲಿ ಕರ್ನಾಟಕ ಮತ್ತು ಕರ್ನಾಟಕದಲ್ಲಿ ಯಾರು ತೋರಿಸದ ಜಾಗವನ್ನು ಕನ್ನಡಿಗರಿಗೆ ತೋರಿಸುತ್ತಿದ್ದರು. ನಂತರ ಭಾರತವನ್ನು ಒಂಟಿಯಾಗಿ ಪರ್ಯಾಟನೆ ಮಾಡಿ ತಮ್ಮ ಆತ್ಮವಿಶ್ವಾಸ ಮತ್ತು ಧೈರ್ಯವನ್ನು ಕನ್ನಡಿಗರಿಗೆ ತೋರಿಸಿಕೊಟ್ಟಿದ್ದರು.

ಭಾರತದ ಸುತ್ತಾಟದ ನಂತರ ಡಾಕ್ಟರ್ ಗುರು ಅವರು ವಿಶ್ವಪರ್ಯಾಟನೆಗಾಗಿ ಪಾಕಿಸ್ತಾನದಲ್ಲಿರುವ ಗುರುದ್ವಾರಕ್ಕೆ ಭೇಟಿ ನೀಡಿ ಪಾಕಿಸ್ತಾನಿ ಪ್ರಜೆಗಳೊಂದಿಗೆ ಕನ್ನಡದಲ್ಲಿ ಸಂವಾದ ಮಾಡಿ ಕನ್ನಡಿಗರ ಮನ ಗೆದ್ದಿದ್ದರು. ಕನ್ನಡದ ಯಾವೊಬ್ಬ ಯುಟ್ಯೂಬರ್ ಕಾಲಿಡದ ತಾಲಿಬಾನ್ ಸಾಮ್ರಾಜ್ಯವಿರುವ ಅಫಘಾನಿಸ್ತಾನ ದೇಶಕ್ಕೆ ತಮ್ಮ ಬಂಡ ಧೈರ್ಯದಿಂದ ಕಾಲಿಟ್ಟು ವೀಕ್ಷಕರಿಗೆ ಶಾಕ್ ನೀಡಿದರು. ಗಗನ್ ಅವರ ತಾಳ್ಮೆ ಮತ್ತು ತಾಳಿಬಾನಿಗಳ ಜೊತೆಗೆ ವರ್ತಿಸಿದ ಬುದ್ಧಿವಂತಿಕೆ ಜನರಿಗೆ ಇಷ್ಟವಾಗಿತ್ತು.

ಫ್ಲೈಯಿಂಗ್ ಪಾಸ್ ಪೋರ್ಟ್ ನ ಆಶಾ ಮತ್ತು ಕಿರಣ್ ದಂಪತಿಗಳು

 

ನಮಸ್ಕಾರ ಎಲ್ಲರಿಗೂ ವೆಲ್ಕಮ್ ಟು ಫ್ಲಯಿಂಗ್ ಪಾಸ್ಪೋರ್ಟ್ ಎಂದು ನಗುಮುಖದಿಂದ ಸ್ವಾಗತಿಸುವ ಆಶಾ ಮತ್ತು ಕಿರಣ್ ಎಂಬ ಟೆಕ್ ದಂಪತಿಗಳು ಕನ್ನಡದ ಪ್ರಮುಖ ಟ್ರಾವೆಲ್ ಯೂಟ್ಯೂಬರ್ಗಳಲ್ಲಿ ಒಬ್ಬರಾಗಿದ್ದಾರೆ.

ಆಶಾ ಮತ್ತು ಕಿರಣ್ ದಂಪತಿಗಳು ಇದುವರೆಗೆ 75ಕ್ಕೂ ಹೆಚ್ಚು ದೇಶಗಳನ್ನು ಜೊತೆಯಾಗಿ ವಿಶ್ವ ಪರ್ಯಟನೆ ಮಾಡುತ್ತಿದ್ದಾರೆ ಮತ್ತು ಕನ್ನಡದ ಮೊಟ್ಟ ಮೊದಲ ಟ್ರಾವೆಲ್ ಯೂಟ್ಯೂಬರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕಿರಣ್ ಅವರು ಮೂಲತ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದವರು, ಆಶಾ ಅವರು ಬೆಂಗಳೂರಿನಲ್ಲಿ ಜನಿಸಿ ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿ ಮಾಡಿದ್ದಾರೆ.

ಕಿರಣ್ ಮತ್ತು ಆಶಾ ದಂಪತಿಗಳು ಬೆಂಗಳೂರಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿಯನ್ನು ಜೊತೆಯಾಗಿ ಮಾಡಿದ್ದಾರೆ. ಸಹಪಾಠಿಗಳಾಗಿದ್ದ ಇವರು ನಂತರ ಪರಸ್ಪರ ಪ್ರೀತಿಸಿ ಕುಟುಂಬದ ಸಮ್ಮುಖದಲ್ಲಿ ವಿವಾಹವಾಗಿ ಜರ್ಮನಿಯಲ್ಲಿ ಉದ್ಯೋಗದಲ್ಲಿ ಇದ್ದರು.

ಕಿರಣ್ ಮತ್ತು ಆಶಾ ದಂಪತಿಗಳು ಮೊದಲು ಬೇಟಿ ನೀಡಿದ ದೇಶವೆಂದರೆ ಫ್ರಾನ್ಸ್ ನಂತರ ಅವರು 2020ರಲ್ಲಿ ಫ್ಲೈಯಿಂಗ್ ಪಾಸ್ಪೋರ್ಟ್ ಎಂಬ ಯೌಟ್ಯೂಬ್ ಚಾನೆಲ್ ಶುರು ಮಾಡಿ ಕನ್ನಡಿಗರಿಗೆ ತಾವು ಭೇಟಿ ನೀಡುವ ದೇಶದ ಕಲೆ, ಜೀವನಶೈಲಿ, ಆಹಾರ ಪದ್ಧತಿ ಗಳನ್ನು ಅಚ್ಚ ಮತ್ತು ಸ್ವಚ್ಛ ಕನ್ನಡದಲ್ಲಿ ಕನ್ನಡದ ವೀಕ್ಷಕರಿಗೆ ತಲುಪಿಸುತ್ತಿದ್ದಾರೆ.

ಸೋನು ದಿ ಸಂಚಾರಿ 

ಸೋನು ದಿ ಸಂಚಾರಿ ಇವರ ಪೂರ್ಣ ಹೆಸರು ಶಹಜಾನ್, ಶಾಲೆಯಲ್ಲಿ ಇವರ ಫ್ರೆಂಡ್ಸ್ ಸೇರಿ ಇಟ್ಟಿರುವ ಹೆಸರು ಸೋನು ಹಾಗಾಗಿ ಇವರು ಸೋನು ಶಹಜಾನ್ ಎಂದೇ ಗುರುತಿಸಿಕೊಂಡಿದ್ದಾರೆ. ಇವರ ತಂದೆ ಊರು ಮುಂಬೈ ತಾಯಿಯವರು ಚಿಕ್ಕಮಗಳೂರು ಜಿಲ್ಲೆಯ ಎನ್ಆರ್ ಪುರ ತಾಲೂಕಿನ ಟಿ ನರಸೀಪುರ. ಬಾಂಬೆಯಲ್ಲಿ ಹುಟ್ಟಿದ ಇವರಿಗೆ ಅಲ್ಲಿ ಉತ್ತಮ ಶಿಕ್ಷಣ, ಆಹಾರ, ಮೂಲಭೂತ ಸೌಲಭ್ಯವನ್ನು ಅವರ ತಂದೆಯ ಕಡೆಯಿಂದ ಕೊಡಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ಮನಕಂಡ ಇವರ ತಾಯಿ ಇವರನ್ನು ಸೀದಾ ಇವರ ಅಜ್ಜಿ ಮನೆಗೆ ಕರೆತಂದರು ಎಂದು ಸೋನು ಅವರು ತಮ್ಮ ವಿಡಿಯೋ ಒಂದರಲ್ಲಿ ತಿಳಿಸಿದ್ದಾರೆ.

ಬಿ ಎಸ್ ಡಬ್ಲ್ಯೂ ಮತ್ತು ಎಂ ಎಸ್ ಡಬ್ಲ್ಯೂ ಪದವಿಯನ್ನು ಪಡೆದಿರುವ ಇವರು ಕೆಲವು ವರ್ಷಗಳ ಕಾಲ ಕಂಪನಿಯೊಂದರಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯಾಗಿ ಕೆಲಸ ಮಾಡಿದ್ದರು. ನಂತರ ಕಂಟೆಂಟ್ ರೈಟರ್ ಮತ್ತು ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡಿದ್ದಾರೆ.

ಪ್ರಸ್ತುತ ಕನ್ನಡ ಯೂಟ್ಯೂಬ್ ನಲ್ಲಿ ಹೆಚ್ಚು ಸಾಹಸೀಮಯ ಮತ್ತು ಒಂಟಿಯಾಗಿ ಇಡೀ ಭಾರತವನ್ನು ಸುತ್ತಾಡುವ ಮಹಿಳೆಯರಲ್ಲಿ ಮುಖ್ಯ ಯೂಟ್ಯೂಬರ್ ಆಗಿ ಗುರುತಿಸಿಕೊಂಡಿದ್ದಾರೆ. 999 ಗಂಟೆಗಳಲ್ಲಿ 30 ರಾಜ್ಯಗಳನ್ನು ಬರೆ ಲಿಫ್ಟ್ ಪಡೆದು ಸಾಹಸಿಮೆಯ ಪ್ರವಾಸ ಮಾಡಿದ ಇವರ ಧೈರ್ಯ ಮತ್ತು ಇವರ ಸಾಧನೆಯನ್ನು ಕನ್ನಡಿಗರು ಆಶ್ಚರ್ಯದಿಂದ ನೋಡುವಂತೆ ಮಾಡಿದ್ದಾರೆ. ಒಟ್ಟಿನಲ್ಲಿ ಹೆಣ್ಣೊಂದು ಕಲಿತರೆ ಏನೆಲ್ಲ ಸಾಧನೆ ಮಾಡಬಹುದು ಎಂಬುದನ್ನು ಇವರು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.

ಲೋಹಿತ್ ಕನ್ನಡ ಟ್ರಾವೆಲರ್

 

ಮಧ್ಯಮ ಕುಟುಂಬದಲ್ಲಿ ಜನಿಸಿದ ಲೋಹಿತ್ ರವರು ಕನ್ನಡದ ಪ್ರಸಿದ್ಧ ಟ್ರಾವೆಲ್ ಯೂಟ್ಯೂಬರ್ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಇವರು ಮೊದಲು ಗೋವಾ, ಮುಂಬೈ ಮತ್ತು ಭಾರತದ ಇತರ ಸ್ಥಳಗಳಲ್ಲಿ ಸುತ್ತಾಟ ಮಾಡುತ್ತಿದ್ದರು. ಡಾಕ್ಟರ್ ಬ್ರೋ ಅವರ ನಂತರ ಅಫ್ಘಾನಿಸ್ತಾನ ದೇಶಕ್ಕೆ ಕಾಲಿಟ್ಟ ಮತ್ತೊಬ್ಬರೆಂದರೆ ಲೋಹಿತ್ ಅವರು.

ಅಫ್ಘಾನಿಸ್ತಾನ ಆದ ನಂತರ ದುಬೈ ಮತ್ತು ಆಫ್ರಿಕಾ ದೇಶಗಳಿಗೆ ಭೇಟಿ ನೀಡಿ ಅಲ್ಲಿನ ಬುಡಕಟ್ಟು ಜನಾಂಗದ ಆಹಾರ ಪದ್ಧತಿ, ಬೇಟೆ, ಕಲೆ, ವೇಶಭೂಷಣಗಳನ್ನು ಕನ್ನಡಿಗರಿಗೆ ಅತ್ಯಂತ ಉತ್ಸಾಹದಿಂದ ಮತ್ತು ತಮ್ಮ ಪರಿಶ್ರಮದಿಂದ ಕನ್ನಡಿಗರಿಗೆ ತೋರಿಸಿ ಕೊಟ್ಟಿದ್ದರು.

BACKPACK WITH M 

ಇವರ ಪೂರ್ಣ ಹೆಸರು ಮಹಾಲಕ್ಷ್ಮಿ ಇವರೊಬ್ಬರು ಕನ್ನಡದ ವಿದೇಶಿ ಪ್ರವಾಸ ಮಾಡುವ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ. ಮಹಾಲಕ್ಷ್ಮಿಅವರು ಶ್ರೀಲಂಕಾ, ಥೈಲ್ಯಾಂಡ್,  Vietnam, ಮಾಲ್ಡೀವ್ಸ್ ದೇಶಗಳನ್ನು ಸುತ್ತಿ ಕನ್ನಡಿಗರಿಗೆ ಉಪಯುಕ್ತವಾದ ಮಾಹಿತಿಗಳನ್ನು ನೀಡಿದ್ದಾರೆ. ಮುಂದಿನ ದಿನದಲ್ಲಿ ಇವರೊಬ್ಬರು ಟಾಪ್ ಯೂಟ್ಯೂಬರ್ಗಳಲ್ಲಿ ಒಬ್ಬರಾಗುವ ಎಲ್ಲಾ ಲಕ್ಷಣಗಳು ಇವರ ವಿಡಿಯೋದಲ್ಲಿ ಕಾಣುತ್ತಿದೆ.

 

Leave a Comment