Sandalwood ಕ್ವೀನ್ ರಮ್ಯಾ ಅವರ ಮುದ್ದಿನ ನಾಯಿ champ ಮಿಸ್ಸಿಂಗ್!

ಬೆಂಗಳೂರು: Sandalwood ಕ್ವೀನ್ ರಮ್ಯಾ ಅವರ ಮುದ್ದಿನ ನಾಯಿ champ ಕಾಣೆಯಾಗಿದೆ ಎಂದು ರಮ್ಯ ಅವರು instragram ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕಾಂಗ್ರೆಸ್ ನ ತಾರಾ ಪ್ರಚಾರಕರಾಗಿರುವ ರಮ್ಯಾ ಅವರ ಮುದ್ದಿನ ನಾಯಿ ರೇಸ್ ಕೋರ್ಸ್ ಬೆಂಗಳೂರಿನಲ್ಲಿರುವ ತಾಜ್ ವೆಸ್ಟ್ ಎಂಡ್ ಹೋಟೆಲ್ ನಿಂದ ಕಾಣೆಯಾಗಿದೆ ಮತ್ತು ಹುಡುಕಿ ಕೊಟ್ಟವರಿಗೆ ಸೂಕ್ತ ಬಹುಮಾನ ನೀಡುವುದಾಗಿ ರಮ್ಯಾ ಅವರು ಘೋಷಿಸಿದ್ದಾರೆ.

Champ ನಾಯಿ ಬೀದಿ ನಾಯಿ ಆಗಿದ್ದು ಕಪ್ಪು ಬಣ್ಣವನ್ನು ಹೊಂದಿದೆ.ಕಣ್ಣು ಮಂಜಾಗಿದೆ ಮತ್ತು ಹೃದಯ ಸಂಬಂಧಿ ಕಾಯಿಲೆ ಹೊಂದಿದೆ ಎಂದು ತಿಳಿಸಿದ್ದಾರೆ. ನಾಯಿಯ ಬಗ್ಗೆ ಮಾಹಿತಿ ದೊರಕಿದವರು 7012708137 ನಂಬರಿಗೆ ಕರೆ ಮಾಡಿ ತಿಳಿಸಬಹುದು ಎಂದು ತಿಳಿಸಿದ್ದಾರೆ.

 

Sandalwood ಕ್ವೀನ್ ಮತ್ತು ಚಿತ್ರದ ನಾಯಕಿ ನಟಿಯ ಶ್ವಾನ ಪ್ರೀತಿ.

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು champ ನಾನು ಪ್ರೀತಿಸುವ ಮುದ್ದಿನ ನಾಯಿ ಮತ್ತು ಚಾಂಪಿಗೆ 16 ವರ್ಷ ಆಗಿದೆ ಎಂದಿದ್ದರು.

Champ ಜೊತೆಗೆ ಇನ್ನೊಂದು ರಾಣಿ ಎಂಬ ಹೆಸರು ನಾಯಿ ಇದೆ ಮತ್ತು ಹೃದಯ ಸಂಬಂಧಿ ಕಾಯಿಲೆ ಇರುವ champ ಹೆಸರಿನ ನಾಯಿಯನ್ನು ರಮ್ಯಾ ಅವರು ಗೋವಾದಿಂದ ರಕ್ಷಿಸಿ ಕರೆತಂದಿದ್ದರು ಎಂದು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಮಾತನಾಡಿದ್ದರು.

Sandalwood queen ರಮ್ಯ ಅವರು ನಟಿಸಿದ ಕನ್ನಡದ ಸೂಪರ್ ಹಿಟ್ ಚಿತ್ರಗಳು 

ಅಭಿ 

2003 ರಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ನಾಯಕ ನಟಿಯಾಗಿ ನಟಿಸಿದ್ದರು. ಅಭಿ ಚಿತ್ರ ಮೋಹಕತಾರೆ ರಮ್ಯಾ ಅವರ ಸಿನಿ ಜೀವನದ ಮೊದಲ ಚಿತ್ರವಾಗಿತ್ತು. ಈ ಚಿತ್ರವನ್ನು ರಮೇಶ್ ಬಾಬು ಅವರು ಕಥೆ ಬರೆದು ನಿರ್ದೇಶನ ಮಾಡಿದ್ದರು.

ಪೂರ್ಣಿಮಎಂಟರ್ಪ್ರೈಸಸ್ ಕಡೆಯಿಂದ ಪಾರ್ವತಮ್ಮ ರಾಜಕುಮಾರ್ ಅವರು ನಿರ್ಮಾಣ ಮಾಡಿದ್ದರು. ರಮ್ಯಾ ಅಭಿನಯದ ಈ ಚಿತ್ರವು ಸೂಪರ್ ಹಿಟ್ ಆಗಿ ಸದ್ದು ಮಾಡಿತ್ತು. ರೋಮ್ಯಾಂಟಿಕ್ ಲವ್ ಸ್ಟೋರಿ ಇರುವ ಈ ಚಿತ್ರಕ್ಕೆ ಗುರುಕಿರಣ್ ಅವರು ಸಂಗೀತ ನಿರ್ದೇಶನ ಮಾಡಿದ್ದರು.

ಎಕ್ಸ್ ಕ್ಯೂಸ್ ಮಿ 

2003 ರಲ್ಲಿ ರೋಮ್ಯಾಂಟಿಕ್ ಡ್ರಾಮಾ ಕಥಹಂದರವನ್ನು ಹೊಂದಿದ್ದ ಈ ಚಿತ್ರ ಸೂಪರ್ ಹಿಟ್ ಆಗಿ ಹೊರಹೊಮ್ಮಿತ್ತು. ಈ ಚಿತ್ರದಲ್ಲಿ ರಮ್ಯಾ ಅವರಿಗೆ ನಾಯಕನಾಗಿ ಅಜಯ್ ರಾವ್ ಅವರು ನಟಿಸಿದ್ದರು. ಎಕ್ಸ್ ಕ್ಯೂಸ್ ಮಿ ಚಿತ್ರವನ್ನು ಜೋಗಿ ಪ್ರೇಮ ಅವರು ನಿರ್ದೇಶನ ಮಾಡಿದರೆ ಎನ್ಎಂ ಸುರೇಶ್ ಎಂಬುವರು ನಿರ್ಮಾಣ ಮಾಡಿದ್ದರು.

ಎಕ್ಸ್ ಕ್ಯೂಸ್ ಮಿ ಚಿತ್ರಕ್ಕೆ ಆರ್ ಪಿ ಪಟ್ನಾಯಕ್ ಸಂಗೀತವನ್ನು ನಿರ್ದೇಶನ ಮಾಡಿದ್ದರು. ಎಕ್ಸ್ ಕ್ಯೂಸ್ ಮಿ ಚಿತ್ರ 200 ದಿನಗಳ ಕಾಲ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡು ಬ್ಲಾಕ್ ಬಸ್ಟರ್ ಚಿತ್ರವಾಗಿ ಹೊರಹೊಮ್ಮಿತ್ತು.

ಅಮೃತದಾರೆ

2005ರಲ್ಲಿ ಅಮೃತಧಾರೆ ಚಿತ್ರವು ತೆರೆಕಂಡಿತ್ತು. ಈ ಚಿತ್ರದಲ್ಲಿ ರಮ್ಯಾ ಅವರಿಗೆ ಧ್ಯಾನ ಎಂಬವರು ನಾಯಕ ನಟನಾಗಿ ನಟಿಸಿದ್ದರು. ಅಮೃತದಾರೆ ಚಿತ್ರವನ್ನು ನಾಗತಿಹಳ್ಳಿ ಚಂದ್ರಶೇಖರ್ ಅವರು ನಿರ್ದೇಶನ ಮಾಡಿದರೆ ಮನೋಮೂರ್ತಿಯವರು ಸಂಗೀತ ನಿರ್ದೇಶನ ಮಾಡಿದ್ದರು.

ಅಮೃತಧಾರೆ ಚಿತ್ರಕ್ಕೆ ರಮೇಶ್ ಅರವಿಂದ ಅವರು ಕಥೆಯನ್ನು ಬರೆದಿದ್ದರು ಮತ್ತು ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಅಮೃತದಾರೆ ಚಿತ್ರವು ರಮ್ಯಾ ಅವರ ಸಿನಿ ಬದುಕಿನಲ್ಲಿ ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು.

ಜೊತೆ ಜೊತೆಯಲಿ 

2006ರಲ್ಲಿ ತೆರೆಕಂಡ ಈ ಚಿತ್ರವನ್ನು ದಿನಕರ್ ತೂಗುದೀಪ ಅವರು ನಿರ್ದೇಶನ ಮಾಡಿದ್ದರು ಮತ್ತು ರಮ್ಯಾ ಅವರಿಗೆ ನಾಯಕ ನಟನಾಗಿ ನೆನಪಿರಲಿ ಪ್ರೇಮ್ ಅವರು ನಟಿಸಿದ್ದರು. ತೂಗುದೀಪ ಪ್ರೊಡಕ್ಷನ್ ಕಡೆಯಿಂದ ಮೀನಾ ತೂಗುದೀಪ ಶ್ರೀನಿವಾಸ್ ನಿರ್ಮಾಣ ಮಾಡಿದ್ದರು ವಿ ಹರಿಕೃಷ್ಣ ಅವರು ಸಂಗೀತ ನಿರ್ದೇಶನ ಮಾಡಿದ್ದರು.

 ಗೌರಮ್ಮ 

2005ರಲ್ಲಿ ರೋಮ್ಯಾಂಟಿಕ್ ಕಾಮಿಡಿ ಚಿತ್ರವಾಗಿ ಗೌರಮ್ಮ ಚಿತ್ರ ತೆರೆಕಂಡಿತ್ತು. ಈ ಚಿತ್ರದಲ್ಲಿ ರಮ್ಯಾ ಅವರು ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ನಾಯಕಿ ನಟಿಯಾಗಿ ನಟಿಸಿದ್ದರು. ಗೌರಮ್ಮ ಚಿತ್ರವನ್ನು ನಾಗಣ್ಣ ಅವರು ನಿರ್ದೇಶನ ಮಾಡಿದರೆ ಶೈಲೇಂದ್ರಬಾಬು ಅವರು ನಿರ್ಮಾಣ ಮಾಡಿದ್ದರು.

ಗೌರಮ್ಮ ಚಿತ್ರಕ್ಕೆ ಎಸ್ಎ ರಾಜಕುಮಾರ ಅವರು ಸಂಗೀತ ನಿರ್ದೇಶನ ಮಾಡಿದ್ದರು ಮತ್ತು ಅಂದಾಜು 10 ಕೋಟಿಯವರೆಗೆ ಈ ಚಿತ್ರ ಗಳಿಕೆ ಮಾಡಿ ಹಿಟ್ ಎಂದೆನಿಸಿಕೊಂಡಿತ್ತು. ರಮ್ಯ ಮತ್ತು ಉಪೇಂದ್ರ ಅವರ ನಟನೆ ಪ್ರೇಕ್ಷಕರಿಗೆ ಹೆಚ್ಚು ಖುಷಿ ತಂದು ಕೊಟ್ಟಿತ್ತು.

ಅರಸು

2 2007ರಲ್ಲಿ ಅರಸು ಚಿತ್ರವು ಕರ್ನಾಟಕ ರಾಜ್ಯದಲ್ಲಿ ತೆರೆಕಂಡಿತ್ತು. ಈ ಚಿತ್ರದಲ್ಲಿ ರಮ್ಯಾ ಅವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ನಾಯಕಿ ನಟಿಯಾಗಿ ಅಭಿನಯ ಮಾಡಿದ್ದರು. ಪುನೀತ್ ರಾಜಕುಮಾರ್ ಅವರ ಪರಿಪೂರ್ಣ ನಟನೆ ಮತ್ತು ರಮ್ಯಾ ಅವರ ಅಭಿನಯ ಈ ಚಿತ್ರವನ್ನು ಸೂಪರ್ ಹಿಟ್ ಮಾಡಲು ಮುಖ್ಯ ಕಾರಣವಾಗಿತ್ತು.

ಈ ಚಿತ್ರವನ್ನು ಪೂರ್ಣಿಮಾ ಎಂಟರ್ಪ್ರೈಸಸ್ ನಿಂದ ಪಾರ್ವತಮ್ಮ ರಾಜಕುಮಾರ್ ಅವರು ನಿರ್ಮಾಣವನ್ನು ಮಾಡಿದ್ದರು. ಅರಸು ಚಿತ್ರವನ್ನು ಮಹೇಶ್ ಬಾಬು ಎಂಬವರು ತಮ್ಮ ಚೊಚ್ಚಲ ನಿರ್ದೇಶನದಲ್ಲಿ ನಿರ್ದೇಶನ ಮಾಡಿದ್ದರು. ಅರಸು ಚಿತ್ರ ರಮ್ಯಾ ಅವರ ಸಿನಿ ಪಯಣದಲ್ಲಿ ಇನ್ನೊಂದು ಸೂಪರ್ ಹಿಟ್ ಚಿತ್ರವಾಗಿ ಮೂಡಿಬಂದಿತ್ತು.

ಮುಸ್ಸಂಜೆ ಮಾತು 

16 ಮೇ 2018 ರಲ್ಲಿ ಮುಸ್ಸಂಜೆ ಮಾತು ಸಿನಿಮಾ ತೆರೆಕಂಡಿತ್ತು. ಮುಸ್ಸಂಜೆ ಮಾತು ಸಿನಿಮಾದಲ್ಲಿ ಮೋಹಕತಾರೆ ರಮ್ಯಾ ಅವರು ಕಿಚ್ಚ ಸುದೀಪ್ ಅವರಿಗೆ ನಾಯಕ ನಟಿಯಾಗಿ ಅಭಿನಯ ಮಾಡಿದ್ದರು.

ಈ ಚಿತ್ರವನ್ನು ಮುಸ್ಸಂಜೆ ಮಹೇಶ್ ಎಂಬವರು ನಿರ್ದೇಶನ ಮಾಡಿದರೆ ಶ್ರೀಧರ್ ವಿ ಸಂಭ್ರಮ್ ಎಂಬುವರು ಸಂಗೀತವನ್ನು ನೀಡಿದ್ದರು. ಮುಸ್ಸಂಜೆ ಮಾತು ಸಿನಿಮಾವನ್ನು ಸುರೇಶ್ ಜೈನ್ ಎಂಬವರು ನಿರ್ಮಾಣ ಮಾಡಿದ್ದರು.

ಸಂಜು ಮತ್ತು ಗೀತಾ 

2011ರಲ್ಲಿ ತೆರೆಕಂಡ ಈ ಚಿತ್ರವನ್ನು ಮೈನಾ ಖ್ಯಾತಿಯ ನಾಗಶೇಖರ್ ಅವರು ನಿರ್ದೇಶನ ಮಾಡಿದ್ದರು. ಸಂಜು ಮತ್ತು ಗೀತಾ ಇಂದಿಗೂ ಮನಸ್ಸಿನಲ್ಲಿ ಉಳಿಯುವ ಕನ್ನಡದ ರೋಮ್ಯಾಂಟಿಕ್ ಚಿತ್ರವಾಗಿದೆ. ರಮ್ಯಾ ಅವರಿಗೆ ನಾಯಕ ನಟನಾಗಿ ಶ್ರೀನಗರ ಕಿಟ್ಟಿ ಅವರು ಅಭಿನಯ ಮಾಡಿದ್ದರು.

ಸಂಜು ಮತ್ತು ಗೀತಾ ಚಿತ್ರವು ಶ್ರೀನಗರ ಕಿಟ್ಟಿ ಮತ್ತು ರಮ್ಯಾ ಹಾಗೂ ನಿರ್ದೇಶಕ ನಾಗಶೇಖರ್ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ತಂದು ಕೊಟ್ಟಿತ್ತು. ಸಂಜು ಮತ್ತು ಗೀತ ಚಿತ್ರದ ಸೂಪರ್ ಹಿಟ್ ಗೀತೆಗಳು ನಿರ್ದೇಶನ ಮಾಡಿದವರು ಕಾಮಿಡಿ ಕಿಂಗ್ ಸಾಧುಕೋಕಿಲ ಅವರು. ಈ ಚಿತ್ರದ ಹಾಡುಗಳು ಇಂದಿಗೂ ಯುವ ಪ್ರೇಮಿಗಳು ಗುಣಗುವಂತೆ ಮಾಡುತ್ತಿದೆ.

ಸಿದ್ಲಿಂಗು 

ಸಿದ್ಲಿಂಗು ಚಿತ್ರವು 2012ರಲ್ಲಿ ಕರ್ನಾಟಕದಲ್ಲಿ ತೆರೆಕಂಡಿತ್ತು. ಈ ಚಿತ್ರದಲ್ಲಿ ರಮ್ಯ ಅವರಿಗೆ ಲೂಸ್ ಮಾದ ಯೋಗಿಯವರು ನಾಯಕ ನಟನಾಗಿ ಅಭಿನಯ ಮಾಡಿದ್ದರು. ರಮ್ಯ ಮತ್ತು ಲೂಸ್ ಮಾದ ಯೋಗಿಯವರ ಅದ್ಭುತ ನಟನೆ ಕನ್ನಡ ಪ್ರೇಕ್ಷಕರನ್ನು ಮೂಕ ವಿಸ್ಮಯ ಮಾಡಿತ್ತು.

ಸಿದ್ಲಿಂಗು ಚಿತ್ರವನ್ನು ಟಿ ಪಿ ಸಿದ್ದರಾಜು ಎಂಬವರು ನಿರ್ಮಾಣ ಮಾಡಿದ್ದರು ಮತ್ತು ಜಯಣ್ಣ ಫಿಲಂಸ್ ಕಡೆಯಿಂದ ವಿಶಾಲ ಕರ್ನಾಟಕಕ್ಕೆ ಹಂಚಿಕೆ ಮಾಡಿದ್ದರು. ಎರಡು ಕೋಟಿ ಬಜೆಟ್ ನಲ್ಲಿ ತಯಾರಾದ ಈ ಚಿತ್ರವು ಉತ್ತಮ ಗಳಿಕೆ  ಮಾಡಿ ಸೂಪರ್ ಹಿಟ್ ಎಂದೆನಿಸಿಕೊಂಡಿತ್ತು. ಅನುಪ್ ಸೀಳಿನ್ ಅವರ ಸಂಗೀತ ಈ ಚಿತ್ರಕ್ಕೆ ಇನ್ನಷ್ಟು ಮೆರಗು ತಂದು ಕೊಟ್ಟಿತ್ತು.

 

 

Leave a Comment